
ಉಡುಪಿ ಅ. 26 : ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇಗುಲವನ್ನು ಸರ್ಕಾರದ ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಬಾರದು ಹಾಗೂ ಬಿಲ್ಲವ ಸಮುದಾಯಕ್ಕೆ ಸೇರಿದ ಅನುವಂಶಿಕ ಧರ್ಮದರ್ಶಿ ಗಳಾಗಿರುವ ಶ್ರೀ ರಾಮಪ್ಪ ನಾಯ್ಕ್ ರವರ ಸ್ಥಾನಮಾನಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ಮನವಿ ನೀಡಲಾಯಿತು.
ಈ ಮನವಿಯನ್ನು ಆಲಿಸಿದ ಸಚಿವರು ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗು ಅಲ್ಲಿನ ಸಚಿವರಾದ ಹಾಲಪ್ಪನವರ ಜೊತೆ ಚರ್ಚಿಸಿ ತೆಗೆದುಕೊಂಡ ನಿರ್ಧಾರವನ್ನು ಸವಿಸ್ತಾರವಾಗಿ ವಿವರಿಸಿದರು. ಸರಕಾರದ ವತಿಯಿಂದ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಳ್ಳಲು ತಾತ್ಕಾಲಿಕವಾಗಿ ಅಧಿಕಾರಿಗಳ ಸಮಿತಿಯನ್ನು ರಚಿಸಿದ್ದು ಹಾಗು ಸಿಗಂದೂರಿನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸದೆ ಈ ಮೊದಲಿನಂತೆ ನಡೆದು ಕೊಂಡು ಬಂದ ರೀತಿಯಲ್ಲಿ ರಾಮಪ್ಪನವರ ಮನೆತನಕ್ಕೆ ಅಧಿಕಾರವನ್ನು ನೀಡಿ ತದನಂತರ ತಾತ್ಕಾಲಿಕ ಸಮಿತಿಯನ್ನು ತೆಗೆಯುವ ಭರವಸೆ ಯನ್ನು ನೀಡಿದರು ಹಾಗೂ ಬಿಲ್ಲವ ಯುವ ವೇದಿಕೆ ಮನವಿಯನ್ನು ಪರಿಶೀಲಿಸಿ ಮಾನ್ಯ ಮುಖ್ಯಮಂತ್ರಿ ಗಳಲ್ಲಿ ಹಾಗೂ ಅಲ್ಲಿನ ಸಚಿವರು,ಶಾಸಕರಲ್ಲಿ ಚರ್ಚಿಸಿ ಸಿಗಂದೂರಿನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸದೆ ರಾಮಪ್ಪನವರ ಮನೆತನಕ್ಕೆ ಬಿಟ್ಟುಕೊಡುವ ಬಗ್ಗೆ ಸೂಕ್ತ ನಿರ್ಧಾರದ ಭರವಸೆಯನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಪ್ರವೀಣ್ ಎಮ್. ಪೂಜಾರಿ, ಗೌರವಾಧ್ಯಕ್ಷರು ದಿವಾಕರ ಸನಿಲ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್,ಉಪಾಧ್ಯಕ್ಷರು ಮಹೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶರತ್ ಕಲ್ಯಾಣಪುರ, ವಿಶುಕುಮಾರ್ ಕಲ್ಯಾಣಪುರ, ವಿಜಯ್ ಕೋಟ್ಯಾನ್, ಪ್ರವೀಣ್ ಸಾಲಿಯಾನ್, ನಿತೇಶ್ ಸುವರ್ಣ ಉಪಸ್ಥಿತರಿದ್ದರು.