ಉಡುಪಿ : ಒಳಕಾಡು ವಾರ್ಡ್ ನಲ್ಲಿ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಸಲು ಕೃಷಿ ಚಟುವಟಿಕೆ (ವಿಡಿಯೋ)

https://youtu.be/000yaYmPh70
ಸಂಪೂರ್ಣ ನ್ಯೂಸ್ ಗಾಗಿ ಮೇಲಿನ ವೀಡಿಯೊ ನೋಡಿ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಶ್ರೀ ರಘುಪತಿ ಭಟ್ ಇವರ ನೇತೃತ್ವದಲ್ಲಿ ಕೇದ್ದೊರತ್ಹಾನ ಟ್ರಸ್ಟ್ ವತಿಯಿಂದ 2000ಕ್ಕೂ ಅಧಿಕ ಹಡಿಲು ಗದ್ದೆಯನ್ನು ಭತ್ತದ ಕೃಷಿ ಮಾಡವ ಕಾರ್ಯ ಭರದಿಂದ ಸಾಗುತ್ತಿದೆ. ಆ ಪ್ರಯುಕ್ತ ನಗರ ಪ್ರದೇಶದ ಒಳಕಾಡು ವಾರ್ಡ್ ನಲ್ಲಿ ಸುಮಾರು 10 ಎಕರೆ ಗದ್ದೆಗೆ ಇಂದು ಕಾರ್ಯಕರ್ತರು ಸೇರಿ ಸುಣ್ಣ ಹಾಕುವ ಕೆಲಸವನ್ನು ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ರಜನಿ ಹೆಬ್ಬಾರ್ ಬೂತ್ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ, ಮಂಜುನಾಥ ಹೆಬ್ಬಾರ್, ವಿಜಯ ಪೂಜಾರಿ, ಕೃಷ್ಣ ಭಟ್, ರತ್ನಾಕರ ಶೆಟ್ಟಿ, ಪ್ರವೀಣ್ ಕುಮಾರ್, ವಿಧ್ಯಾ ಶೇಟ್, ಯೋಗಿ ಪೂಜಾರಿ, ನಿಶಾನ್, ಶ್ರೇಯಶ್ ಶೆಟ್ಟಿ, ಪ್ರಭಾಕರ ಭಂಡಿ, ಕಿಶು ಬೈಲಕೆರೆ, ಸಮರ್ಥ ಪ್ರಭು,
ಮಂಜುನಾಥ್, ಕೃಷ್ಣ, ಪ್ರಸಾದ್, ಮುಂತಾದ 25 ಕ್ಕೂ ಹೆಚ್ಚು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.