
ಮೆಕ್ಸಿಕೋ:ಫುಟ್ ಬಾಲ್ ತಂಡವೊಂದು ಮೃತಪಟ್ಟ ತಂಡದ ಸದಸ್ಯನಿಗೆ ವಿದಾಯವನ್ನು ವಿಶೇಷ ರೀತಿಯಲ್ಲಿ ರೂಪಿಸಿದ ವಿಡಿಯೋವೊಂದು ವೈರಲ್ ಆಗಿದೆ. 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಪೊಲೀಸರ ಗುಂಡಿಗೆ ಆಕಸ್ಮಿಕವಾಗಿ ಬಲಿಯಾಗಿದ್ದ. ಆತನ ಫುಟ್ಬಾಲ್ ಟೀಮ್ಮೇಟ್ಸ್ ಪ್ರತಿದಿನ ಆತ ಫುಟ್ಬಾಲ್ ಆಡುತ್ತಿದ್ದ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ದು, ಆತ ಕೊನೆಯ ಗೋಲು ಹೊಡೆಯುವಂತೆ ಮಾಡಿ ಅಂತಿಮ ವಿದಾಯ ನೀಡಿದರು.
54 ಸೆಕೆಂಡಿನ ವಿಡಿಯೋದಲ್ಲಿ ಫುಟ್ಬಾಲ್ ಕೋರ್ಟ್ನಲ್ಲಿ ಸ್ನೇಹಿತನ ಮೃತದೇಹ ಇರುವ ಪೆಟ್ಟಿಗೆ ಇಟ್ಟಿರುತ್ತಾರೆ. ತಂಡದ ಒಬ್ಬ ಸದಸ್ಯ ಬಾಲ್ ಅನ್ನು ಮತ್ತೋರ್ವನಿಗೆ ಪಾಸ್ ಮಾಡಿದಾಗ ಆತನ ಚೆಂಡನ್ನು ಕೆಫಿನ್ ಕಡೆಗೆ ಒದೆಯುತ್ತಾನೆ. ಕೆಫಿನ್ಗೆ ತಾಗಿದ ಬಾಲ್ ಸೀದ ಗೋಲಿನೊಳಗೆ ಹೋಗುತ್ತದೆ. ಬಳಿಕ ಎಲ್ಲರೂ ಕೆಫಿನ್ ಅನ್ನು ತಬ್ಬಿಕೊಂಡು ಅಗಲಿದ ಟೀಮ್ಮೇಟ್ಗೆ ಕಂಬನಿ ಮಿಡಿಯುತ್ತಾರೆ. ಈ ವೇಳೆ ಅಲ್ಲಿ ಸೇರಿದ್ದ ಗುಂಪು ಚಿಯರ್ ಮಾಡಿರುವುದನ್ನು ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದೆ.
#Oaxaca | #Cuenca ? Compañeros de Alexander lo despiden, mete su último gol. pic.twitter.com/dJ9hY2DaTW
— Noticias de Oaxaca | TVBUS (@tvbus) June 11, 2020