
ಕಾರವಾರ: ಕೊರೊನಾ ವೈರಸ್ ನಿಂದಾಗಿ ಲಾಕ್ಡೌನ್ ಹಾಗೂ ವೈರಸ್ ನ ಹರಡುವಿಕೆಯ ಭಯದಿಂದಾಗಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಈ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಂಚಿಕೊಂಡಿರುವ ಫೋಟೋವೊಂದು ಉತ್ತರ ಕನ್ನಡಿಗರ ಮನ ಗೆದ್ದಿದೆ. ಈ ನಡುವೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಫೇಸ್ಬುಕ್ ಖಾತೆಯಲ್ಲಿ ಗೋಕರ್ಣದ ಫೋಟೋವನ್ನು ಹಂಚಿಕೊಂಡಿದೆ. ಬಾಂಗ್ಲಾದೇಶ ಮೂಲದ, ಬೆಂಗಳೂರಿನಲ್ಲಿ ಉದ್ಯೋಗದ ನಿಮಿತ್ತ ನೆಲೆಸಿರುವ ಪೊರಗ್ ಸರ್ಕೆರ್ ಎಂಬ ಹವ್ಯಾಸಿ ಫೋಟೋಗ್ರಾಫರ್ ಕ್ಲಿಕ್ಕಿಸಿರುವ ಫೋಟೋವೊಂದನ್ನು ಐಸಿಸಿ ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಗೋಕರ್ಣದ ಸಮುದ್ರ ತೀರದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವುದು ಸೆರೆಯಾಗಿದೆ.
https://www.facebook.com/icc/photos/a.163728620312909/3481082031910868/?type=3&theater