ರಾಜ್ಯ
Trending

ಉಡುಪಿ: ಸ್ಪೀಕರ್ ವಿಶ್ವೇಶ್ವರ್‌ ಹೆಗಡೆ ಕಾಗೇರಿ ರಾಜೀನಾಮೆಗೆ ಕೆಆರ್‌ಎಸ್‌ ಆಗ್ರಹ

ಉಡುಪಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಕರ್ತವ್ಯ ನಿರ್ವಹಣೆಗೆ ಸಂವಿಧಾನಬಾಹಿರ ತಡೆಯಾಜ್ಞೆ ನೀಡಿದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಉಪಾಧ್ಯಕ್ಷ ಪಿ. ಅಮೃತ್ ಶೆಣೈ ಒತ್ತಾಯಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಯಲ್ಲಿ ಮಾತನಾಡಿ, ರಾಜ್ಯ ಸರಕಾರದ ಕೆಡಿಎಲ್‍ಡಬ್ಲ್ಯುಎಸ್ ಸಂಸ್ಥೆಯಿಂದ ಕೊರೊನಾ ತಡೆಗೆ ಅಗತ್ಯವಾದ ಔಷಧ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 300 ಕೋಟಿ ರೂ.ಗಳಿಗೂ ಅಧಿಕ ಹಗರಣ ನಡೆದಿದ್ದು, ಸ್ಪೀಕರ್ ಭ್ರಷ್ಟರ ರಕ್ಷಣೆಗೆ ದುರುದ್ದೇಶದ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್ ರಾಜ್ಯದ ಜನತೆಯ ಕ್ಷಮೆ ಕೇಳಿ, ಸಂವಿಧಾನಬಾಹಿರ ತಡೆಯಾಜ್ಞೆ ತೆರವುಗೊಳಿಸಬೇಕು. ಸ್ಪೀಕರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರನ್ನು ಆಗ್ರಹಿಸಲಿದ್ದು ಭ್ರಷ್ಟರಿಗೆ ಶಿಕ್ಷೆಯಾಗುವ ತನಕ ಹೋರಾಟ ನಡೆಯಲಿದೆ. ವಿಪತ್ತಿನ ಸಂದರ್ಭ ದುರುಪಯೋಗಪಡಿಸಿ ಅಕ್ರಮ ಎಸಗಿ, ಸರಕಾರಕ್ಕೆ ನೂರಾರು ಕೋಟಿ ರೂ. ನಷ್ಟ ಮಾಡಿದ್ದು ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಸುಪರ್ದಿಯಲ್ಲಿಡಬೇಕು ಎಂದರು.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸ್ಥಳ ಪರಿಶೀಲನೆಗೆ ಸ್ಪೀಕರ್‌ ತಡೆ, ಎಚ್‌ಕೆ ಪಾಟೀಲ್‌ ಆಕ್ಷೇಪ

3 ಕೋಟಿ ರೂ. ಪಿಪಿಇ ಕಿಟ್ ಖರೀದಿ, ಬಳಸಿದ ವೆಂಟಿಲೇಟರನ್ನು ಹೊಸ ವೆಂಟಿಲೇಟರ್ ದರದಲ್ಲಿ ಖರೀದಿ, ಎರಡೂವರೆ ಪಟ್ಟು ಹೆಚ್ಚಿನ ದರಕ್ಕೆ ಸ್ಯಾನಿಟೈಸರ್ ಖರೀದಿ ಮಾಡಿದ ಕೆಡಿಎಲ್‍ಡಬ್ಲ್ಯುಎಸ್ ಸಂಸ್ಥೆಯು ಕಡಿಮೆ ದರಕ್ಕೆ ಡಯಾಲಿಸಿಸ್ ಉಪಕರಣಗಳನ್ನು ಮಾರಿದೆ. ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಯಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.

‘ಬೆಂಗಳೂರು ಏರ್‌ಪೋರ್ಟ್‌ ಮಾರ್ಗಸೂಚಿಗಳು ಮಂಗಳೂರಿಗೂ ಅನ್ವಯʼ: ಡಾ.ಕೆ.ಸುಧಾಕರ್‌

ಸುದ್ದಿಗೋಷ್ಟಿಯಲ್ಲಿ ಪ್ರಸಾದ್ ಕರ್ಕಡ, ಶಾಹಿದ್ ಅಲಿ, ಸಲ್ಮಾನ್ ಅಹಮದ್, ವಿನುತಾ ಕಿರಣ್, ಸಫಾನ್, ಶಂಸುದ್ದೀನ್, ಸಲ್ಮಾನ್ ಅಶ್ರಫ್, ಅನಸ್ ಅಶ್ರಫ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker