
ಇಂಡಿಯನ್ ಐಡಲ್ ಹಾಡುವ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ 5ನೇ ಸ್ಥಾನ ಪಡೆದ ಕರ್ನಾಟಕದ ಏಕೈಕ ಸ್ಪರ್ಧಿ ಮೂಡಬಿದ್ರೆಯ “ನಿಹಾಲ್ ತಾವ್ರೋ” ಇವರಿಗೆ ನಿರಂತರ್ ಉದ್ಯಾವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಐಸಿವೈಎಂ ಉದ್ಯಾವರ ಇವರ ಸಹಕಾರದೊಂದಿಗೆ ಇಂದು ದಿನಾಂಕ 29-08-2021 ರಂದು ಉದ್ಯಾವರ ಝೇವಿಯರ್ ಸಭಾಭವನದಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿ ಅಭಿನಂದಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಸ್ಟ್ಯಾನಿ ಬಿ. ಲೋಬೋ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀಯಾನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಲಯನ್ಸ್ ಕ್ಲಬ್ ನ ಉಪ ಗವರ್ನರ್ ನೇರಿ ಕರ್ನೆಲಿಯೊ, ಕಥೋಲಿಕ್ ಸಭಾ ಅಧ್ಯಕ್ಷರಾದ ಮೇರಿ ಡಿ’ಸೋಜ ಹಾಗೂ ನಿರಂತರ್ ಉದ್ಯಾವರದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.