
ನ್ಯೂಜಿಲೆಂಡ್: ಆರು ತಿಂಗಳ ಬಳಿಕ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ನಲ್ಲಿ ಮೂರು ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಪತ್ತೆಯಾಗಿರುವುದು ಡೆಲ್ಟಾ ರೂಪಾಂತರಿ ಕೊರೋನಾ ಎಂದು ಶಂಕಿಸಲಾಗಿದೆ. ಹೀಗಾಗಿ ಗೇಮ್ ಚೇಂಜರ್ ಆಗಲು ನಾವು ಅವಕಾಶ ಮಾಡಿ ಕೊಡುವುದಿಲ್ಲ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.
ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಹದಗೆಡಬಹುದು ಹೀಗಾಗಿ ಕಠಿಣ ನಿಯಮ ಅಗತ್ಯವಾಗಿದೆ ಎಂದಿದ್ದಾರೆ.