
ಖ್ಯಾತ ನಟ ಅನುಪಮ್ ಶ್ಯಾಮ್(೬೩) ಅನಾರೋಗ್ಯದಿಂದ ಭಾನುವಾರ(ಆ.೮) ನಿಧನರಾದರು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಗೋರೆಗಾಂವ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಕೊನೆಯುಸಿರೆಳೆದರು.
‘ಸತ್ಯ’, ‘ದಿಲ್ ಸೇ’, ‘ಲಗಾನ್’ ಮೊದಲಾದ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿ ಅನುಪಮ್ ಶ್ಯಾನ್ ಜನಪ್ರಿಯರಾಗಿದ್ದರು. ಹಿಂದಿ ಧಾರಾವಾಹಿ ‘ಮಾ ಕಿ ಪ್ರಗ್ಯಾ’ ಮೂಲಕ ಮನೆಮಾತಾಗಿದ್ದರು.
ಅವರ ನಿಧನದ ಬಗ್ಗೆ ಮಾಹಿತಿ ನೀಡಿರುವ ಆಪ್ತ ಯಶ್ ಪಾಲ್ ಶರ್ಮಾ, ಅನುಪಮ್ ನಿಧನರಾದ ಬಗ್ಗೆ ವೈದ್ಯರು ನಮಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು.