
ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಇಂದಿನ ಯುವಕರಿಗೆ ಮಾದರಿಯಾಗುವಂತೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಕಾಂತ್ ಸಂಗಮ್.
ಪೇಜಾವರ ವಿಶ್ವ ಪ್ರಸನ್ನ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಇಂದು ಕುಂದಾಪುರದ “ಶ್ರೀಕಾಂತ್ ಸಂಗಮ್” ಅವರ ಜನ್ಮದಿನದ ಅಂಗವಾಗಿ, “ಸುಭಾಷ್ ಪೂಜಾರಿ ಸಂಗಮ್”, “ಹರೀಶ್ ತೋಳಾರ್ ಕೊಲ್ಲೂರು”, “ವಸಂತ್ ಸಂಗಮ್” ಇವರ ಆಶೀರ್ವಾದದೊಂದಿಗೆ ಸಂಗಮ್ ಗೆಳೆಯರು ಸೇರಿ ನೀಲಾವರ ಗೋಶಾಲೆಗೆ ಒಂದು ಲೋಡ್ ಒಣಹುಲ್ಲು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಅಭಿಯಾನದ ಸ್ಥಾಪಕ ಸಂಚಾಲಕ “ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ” ಗೋಶಾಲೆಯಲ್ಲಿ ಜನ್ಮದಿನ ಆಚರಿಸಿದ “ಶ್ರೀಕಾಂತ್ ಸಂಗಮ್” ಅವರ ಕಾರ್ಯ ಕುಂದಾಪುರ ಭಾಗದ ಯುವಜನರಿಗೆ ಪ್ರೇರಣೆಯಾಗಲಿ ಎಂದರು ಗೋಶಾಲೆಯ ನರಸಿಂಹ ಭಟ್ ಉಪಸ್ಥಿತರಿದ್ದರು.
✍️ ಹರೀಶ್ ಕುಂಭಾಶಿ