
ಹೊಸದಿಲ್ಲಿ: ತನ್ನ ಇನ್ಸೂರೆನ್ಸ್ ಹಣವನ್ನು ಕುಟುಂಬಸ್ಥರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಉದ್ಯಮಿಯೊಬ್ಬರು ಒಬ್ಬ ಅಪ್ರಾಪ್ತ ವಯಸ್ಕ ಸೇರಿ ನಾಲ್ವರಿಗೆ ತನ್ನನ್ನೇ ಕೊಲ್ಲುವುದಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿಕೊಂಡಿರುವ ವಿಚಿತ್ರ ಘಟನೆ ದಿಲ್ಲಿಯಲ್ಲಿ ನಡೆದಿದೆ.
ಶಾನು ಬನ್ಸಾಲ್ ಪತಿ ಗೌರವ್ (37) ದಿನಸಿ ವ್ಯಾಪಾರಿಯಾಗಿದ್ದು, ವ್ಯಾಪಾರಕ್ಕೆ ತೆರಳಿದವರು ಮನೆಗೆ ಹಿಂದಿರುಗಿಲ್ಲಎಂದು ಜೂನ್ 10ರಂದು ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರುಸುಮಾರು 6 ಲಕ್ಷ ರೂ. ವೈಯಕ್ತಿಕ ಸಾಲ ಹೊಂದಿದ್ದ ಗೌರವ್, ಕ್ರೆಡಿಟ್ ಕಾರ್ಡ್ ವಂಚನೆಗೂ ಗುರಿಯಾಗಿ 3.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು. ತಾವು ಸತ್ತ ನಂತರ ತನ್ನ ಪತ್ನಿ ನೆಮ್ಮದಿಯಾಗಿ ಇರಬಹುದೆಂದು ತಮ್ಮದೇ ಹತ್ಯೆಗೆ ಸುಪಾರಿ ನೀಡಿ ಜೂನ್ 9ರ ರಾತ್ರಿ ಬಸ್ ನಲ್ಲಿ ದಿಲ್ಲಿಯ ಹೊರವಲಯ ರಾನ್ಹೌಲ ತಲುಪಿದ ಗೌರವ್, ಸುಪಾರಿ ಹಂತಕರಿಗೆ ಮೊಬೈಲ್ ನಲ್ಲಿ ತಮ್ಮದೇ ಫೋಟೊವನ್ನು ರವಾನಿಸಿ ಹಣವನ್ನೂ ಪಾವತಿಸಿದರು ಸುಪಾರಿ ಹಂತಕರಾದ ಮನೋಜ್ ಕುಮಾರ್ ಯಾದವ್, ಸೂರಜ್, ಸುಮೀತ್ ಕೂಡ ಗೌರವ್ ಇದ್ದ ಸ್ಥಳಕ್ಕೆ ಆಗಮಿಸಿ ಆತನ ಕೈಗಳನ್ನು ಕಟ್ಟಿಹಾಕಿ ಮರಕ್ಕೆ ನೇಣು ಹಾಕಿದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.