ಕರಾವಳಿ
ಪುಣೆ: ರಸ್ತೆ ಅಪಘಾತ ಮಂಗಳೂರು ಮೂಲದ ಯುವ ದಂತ ವೈದ್ಯೆ ಮೃತ್ಯು

ಮಂಗಳೂರು : ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಪುಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರು ನಗರದ ವೆಲೆನ್ಸಿಯ ನಿವಾಸಿ ಜಿಶಾ ಜೋನ್ ಮೃತರು ಎಂದು ಗುರುತಿಸಲಾಗಿದೆ. ಈ ಅಪಘಾತ ಜಿಶಾ ಜೋನ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದೆ.
ಮಂಗಳೂರಿಗೆ ಮೃತದೇಹವನ್ನು ತರಲಾಗಿದೆ. ಇಂದು ಮಧ್ಯಾಹ್ನ 2:30ಕ್ಕೆ ಜೆಪ್ಪು ಸೈಂಟ್ ಆ್ಯಂಟೋನಿ ಚರ್ಚ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರು ಪತಿ, ತಂದೆ-ತಾಯಿ, ಸಹೋದರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.