ಕರಾವಳಿ
Trending

ಉಚಿತ ಸೇವೆ ಒಂದು ವಾರ ನೀಡಿದ ಖಾಸಗಿ ಬಸ್ಸು ಮ್ಹಾಲಕರು ಟಿಕೇಟ್ ದರ ಹೆಚ್ಚಿಸಿರುವುದು ಖಂಡನೀಯ – ವಿಶ್ವಾಸ್ ಅಮೀನ್

ಉಡುಪಿ: ಉಡುಪಿಯಲ್ಲಿ ಒಂದು ವಾರ ಉಚಿತ ಖಾಸಗಿ ಬಸ್ ಗಳು ಓಡಿಸಿದ ಹೃದಯವಂತ ಬಸ್ ಮಾಲಕರು ಜೂನ್ 1 ರಿಂದ   ಟಿಕೇಟ್ ದರ ಹೆಚ್ಚಿಸಿರುವುದನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಖಂಡಿಸಿದ್ದಾರೆ.

ಲಾಕ್ ಡೌನ್ ಸಮಸ್ಯೆಯಿಂದ ಎಲ್ಲಾ ವರ್ಗದ ಜನರೂ ಕೂಡ ತಮ್ಮ ತಮ್ಮ ಉದ್ಯೋಗದಲ್ಲಿ ನಷ್ಟದಲ್ಲಿದ್ದು ಅವರ ಕಷ್ಟ ಪರಿಹರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಈ ನಡುವೆ ಬಸ್ ಮಾಲಕರು ಗಾಯದ ಮೇಲೆ ಬರೆ ಎಂಬಂತೆ ಬಸ್ ದರ ಏರಿಕೆ ಮಾಡುತ್ತಿರುವುದು ಸರಿಯಲ್ಲ ಬಸ್ ಮ್ಹಾಲಕರು ಸರಕಾರದ ಮೇಲೆ ಒತ್ತಡ ತಂಡು ಡಿಸೇಲ್ ಮೇಲಿರುವ ತೆರಿಗೆ ಅಥವಾ ಮಾರುಕಟ್ಟೆ ದರದಲ್ಲಿ ಇಳಿಕೆ ಮಾಡಬಹುದಾಗಿತ್ತು. ಅಲ್ಲದೆ ಪರ್ಮಿಟ್ ದರ, ವಿಮಾ ದರ ವನ್ನು ಇಳಿಸಿಕೊಂಡು ಬಸ್ ಮ್ಹಾಲಕರು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳುವುದರ ಜೊತೆಗೆ ಜನಸಾಮಾನ್ಯರ ಮೇಲಿನ ಹೊರೆಯನ್ನು ಇಳಿಸುವ ಕೆಲಸ ಮಾಡಬಹುದಾಗಿತ್ತು.

ಸರಕಾರ ಎಲ್ಲದರ ಜವಾಬ್ದಾರಿಯನ್ನು ಜನರ ಮೇಲೆ ಹೋರಿಸಿ, ಬೆಲೆ ಏರಿಕೆಯನ್ನ ಜನರೇ ನಿಭಾಯಿಸಬೇಕು ಎನ್ನುವುದು ಯಾವ ನ್ಯಾಯ? ಬಸ್ ಮಾಲಕರು ಸರಕಾರದ ಬೆಲೆ ಏರಿಕೆಯ ವಿರುದ್ದ ಧ್ವನಿ ಎತ್ತದೇ ಜನರಿಗೆ ಬೆಲೆ ಏರಿಕೆಯ ಬಿಸಿ ಹತ್ತಿಸುವುದು ಎಷ್ಟು ಸರಿಯಾದ ಕ್ರಮವಲ್ಲ.

ಅಲ್ಲದೆ ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ರಿಯಾಯತಿ ಪಾಸ್ ಗಳನ್ನು ಕೂಡ ರದ್ದುಪಡಿಸಿರುವುದರಿಂದ ಬಡ ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಪ್ರಯಾಣಿಕರು ಇದರಿಂದ ತೊಂದರೆಗೆ  ಒಳಪಡಬೇಕಾಗುತ್ತದೆ. ಈ ನಡುವೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆರಂಭಿಸಿದ್ದ ನರ್ಮ್ ಬಸ್ಸುಗಳು ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯ ಪ್ರಯಾಣಿಸುವವರಿಗೆ ರಿಯಾಯತಿ ಪಾಸ್ ನೀಡಿದ್ದು ಆ ಬಸ್ಸುಗಳನ್ನು ಖಾಸಗಿ ಬಸ್ಸು ಮ್ಹಾಲಕರ ಲಾಬಿ ಮಣಿದು ಜಿಲ್ಲಾಡಳಿತ ಇನ್ನೂ ಕೂಡ ಆರಂಭಿಸಿಲ್ಲ.  ಕೂಲಿ ಕಾರ್ಮಿಕರು ಮತ್ತು ತಿಂಗಳಿಗೆ 5000, 10000 ವೇತನ ಪಡೆಯುವ  ವ್ಯಕ್ತಿಗಳು ತಮ್ಮ ಪೂರ್ಣ ವೇತನವನ್ನು ಕೇವಲ ಬಸ್ಸಿಗೆ ತೆಗೆದಿಡುವ ಪರಿಸ್ಥಿತಿ ಉಂಟಾಗಿದೆ.

ಬಸ್ಸು ಮ್ಹಾಲಕರು ಕೇವಲ ಟಿಕೇಟ್ ದರವನ್ನು ಹೆಚ್ಚಿಸಿದ್ದು ಅವರ ಸಿಬಂದಿಗಳ ಸಂಬಳವನ್ನು ಕೂಡ ಏರಿಸಬೇಕು. ಮತ್ತು ಬಸ್ಸು ಟಿಕೇಟ್ ದರ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಮಾರ್ಗದರ್ಶನ ನೀಡಿ ಜನರಿಗೆ ವಿದ್ಯಾರ್ಥಿಗಳಿಗೆ ಸಹಕಾರ ನೀಡಬೇಕು. ಇದರ ಜೊತೆಯಲ್ಲಿ ನರ್ಮ್ ಬಸ್ಸುಗಳನ್ನು ಪುನರಾರಂಭಿಸಬೇಕು ಇಲ್ಲವಾದಲ್ಲಿ ಅದರ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker