
PG ಗ್ರಾಹಕರ ಅನುಕೂಲಕ್ಕಾಗಿ LPG ಸಿಲಿಂಡರ್ ಬುಕಿಂಗ್ ಸಂಬಂಧ ಶೀಘ್ರ ಹೊಸ ನಿಯಮ ಜಾರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೌದು, ಈ ಹೊಸ ನಿಯಮ ಜಾರಿಯಾದರೆ, LPG ಗ್ರಾಹಕರು ಸ್ವಂತ ಅನಿಲ ಏಜೆನ್ಸಿಯಿಂದ ಸಿಲಿಂಡರ್ ಕಾಯ್ದಿರಿಸುವ ಅಗತ್ಯವಿಲ್ಲ. ಅಗತ್ಯವಿದ್ದಾಗ ಬೇರೆ ಅನಿಲ ಏಜೆನ್ಸಿಯಿಂದ ಗ್ಯಾಸ್ ಬುಕ್ ಮಾಡಬಹುದು.
ಹೌದು, LPG ಗ್ರಾಹಕರು, ಇಂಡಿಯನ್ ಆಯಿಲ್ (ಐಒಸಿ) ಸಿಲಿಂಡರ್ ಹೊಂದಿದ್ದರೂ, ಇದರ ಬದಲು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಿಲಿಂಡರ್ ಸಹ ಬುಕ್ ಮಾಡಬಹುದಾಗಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ