
ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಗುಂಡಿಬೈಲು ವಾರ್ಡಿನಲ್ಲಿ 5 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದ್ದು, ಇಂದು ದಿನಾಂಕ 05-07-2021 ರಂದು ಭಾಗೀರಥಿ ಪೆಟ್ರೋಲ್ ಬಂಕ್ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕಾಣಿಯೂರು ಮಠ, ಶ್ರೀ ಶೇಖರ್ ಜತ್ತನ್ ಮಾಲಕರು ಶಿವ ಸಾಫ್ಟ್‌ಡ್ರಿಂಕ್ಸ್, ಶ್ರೀ ಪ್ರಕಾಶ್ ಶೆಟ್ಟಿ ಮಾಲಕರು ಭಾಗೀರಥಿ ಸರ್ವಿಸ್ ಸ್ಟೇಷನ್, ಶ್ರೀ ಪ್ರಭಾಕರ್ ಭಟ್ ಬಿಲ್ಡರ್, ಗುಂಡಿಬೈಲು ಅವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿಗೆ ಚಾಲನೆ ನೀಡಿದರು.
ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಈವರೆಗೆ ಅನೇಕ ಜನಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ, ಆದರೆ ಕೇದಾರೋತ್ಥಾನ ಟ್ರಸ್ಟ್ ರಚಿಸಿ ಸ್ಥಳೀಯರನ್ನು ಸೇರಿಸಿಕೊಂಡು ಹಡಿಲು ಭೂಮಿಯನ್ನು ಹಸನಾಗಿಸುತ್ತಿರುವ ಈ ಕೆಲಸ ದೇವರು ಮೆಚ್ಚುವಂತಹ ಕೆಲಸ ಎಂದು ಹೇಳಿದ ಅವರು ಈ ಕಾರ್ಯ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಲಿ ಎಂದರು.
ಈ ಭಾಗದಲ್ಲಿ ಹಡಿಲು ಭೂಮಿ ಆಂದೋಲನಕ್ಕೆ ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಹಿರಿಯ ಕೃಷಿಕರಾದ ರಾಘವೇಂದ್ರ ಭಟ್, ಗುರ್ಕಾರರಾದ ಸಂಜೀವ ಜತ್ತನ್, ಸ್ಥಳೀಯರಾದ ರಾಜೀವ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಹಾಗೂ ಜನತಾ ವ್ಯಾಯಾಮ ಶಾಲೆಯ ಸರ್ವ ಸದಸ್ಯರು, ಮಹಿಳಾ ಮಂಡಳಿಯ ಸರ್ವ ಸದಸ್ಯರು, ಜೆ.ಸಿ.ಐ ದೊಡ್ಡಣ್ಣಗುಡ್ಡೆ ಸದಸ್ಯರು, ನಮ್ಮ ಫ್ರೆಂಡ್ಸ್ ದೊಡ್ಡಣಗುಡ್ಡೆ ಸದಸ್ಯರು, ಕೃಷಿಕರು, ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.