
ದುಬೈ–ಕೋಯಿಕ್ಕೋಡ್ ಹಾರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ಐಎಕ್ಸ್–1344) ಕೇರಳದ ಕೋಯಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಅವಘಡಕ್ಕೀಡಾಗಿದೆ.
ರಾತ್ರಿ 7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅವಘಢಕ್ಕೀಡಾದ ವಿಮಾನದಲ್ಲಿ 174 ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಇದ್ದರೆನ್ನಲಾಗಿದೆ.ಅವರುಗಳಲ್ಲಿ ಇಬ್ಬರು ಪ್ರಯಾಣಿಕರು , ಪೈಲಟ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ .