
ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದೆ.ಬೆಂಗಳೂರು ಸಹಿತ ರಾಜ್ಯದೆಲ್ಲೆಡೆಯ ಅಪಾರ್ಟ್ಮೆಂಟ್ ಹಾಗೂ ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಆವರಣದಲ್ಲಿ ಬರ್ತ್ ಡೇ ಪಾರ್ಟಿ, ಕಿಟ್ಟಿ ಪಾರ್ಟಿ ಸಹಿತ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ನಿರ್ಬಂಧ ವಿಧಿಸಿದೆ.
ಆದರೆ, ಲಾಕ್ಡೌನ್ ವೇಳೆ ಕೆಲ ಅಪಾರ್ಟ್ಮೆಂಟ್ಗಳಲ್ಲಿ ಕಿಟ್ಟಿ ಪಾರ್ಟಿಯನ್ನು ಹಾಗು ಸಣ್ಣಪುಟ್ಟ ಪಾರ್ಟಿ ಗಳನ್ನೂ ಗ್ರ್ಯಾಂಡ್ ಆಗಿ ಆಚರಿಸಲು ಮುಂದಾಗಿದ್ದರು.ಈ ಬಗ್ಗೆ ಮಾಹಿತಿ ಆಧರಿಸಿ ಸರಕಾರ ಅಪಾರ್ಟ್ಮೆಂಟ್ ಆವರಣದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ವಿಧಿಸಿದೆ . ಅದಲ್ಲದೆ ಅಪಾರ್ಟ್ಮೆಂಟ್ಗಳಲ್ಲಿ ಲಿಫ್ಟ್ ಆದಷ್ಟು ಕಡಿಮೆ ಬಳಸಲು ಹೇಳಿದೆ,ಲಿಫ್ಟ್ ಬದಲು ಮೆಟ್ಟಿಲುಗಳನ್ನು ಉಪಯೋಗಿಸುವಂತೆ ಸಲಹೆ ನೀಡಲಾಗಿದೆ.
ಆವರಣದೊಳಗಿರುವ ಜಿಮ್, ಕ್ರೀಡಾಂಗಣ, ಈಜುಕೊಳ, ಕ್ಲಬ್ ಚಟುವಟಿಕೆ ಹಾಗೂ ಯಾವುದೇ ಶಿಬಿರವನ್ನು ಸರಕಾರ ಸೂಚಿಸುವವರೆಗೂ ನಡೆಸುವಂತಿಲ್ಲ. ಪಾರ್ಕ್ ಹಾಗೂ ನಡಿಗೆ ಪಥಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಬಳಸಲು ಮಾತ್ರ ಅವಕಾಶ ನೀಡಲಾಗಿದೆ.