ಕರಾವಳಿ

ಜಿ. ಎಸ್ . ಬಿ . ಸಮಾಜ ಹಿತರಕ್ಷಣಾ ವೇದಿಕೆ (ರಿ) ವಿದ್ಯಾ ಪೋಷಕ ನಿಧಿ : ಆಮಂತ್ರಣ ಪತ್ರಿಕೆ ಬಿಡುಗಡೆ

ಜಿ. ಎಸ್. ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ) ಪ್ರಾಯೋಜಕತ್ವದಲ್ಲಿ 6ನೇ ವರ್ಷದ ವಿದ್ಯಾಪೋಷಕ ನಿಧಿ 2021-22 ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜುಲೈ 21, ಬುಧವಾರ , ಮಂಗಳೂರಿನ ಕೋಡಿಯಾಲಬೈಲಿನಲ್ಲಿರುವ ವೇದಿಕೆಯ ಕಛೇರಿಯಲ್ಲಿ ಜರುಗಿತು .

ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷರಾದ ಸಿ ಎ ಎಸ್. ಎಸ್ . ನಾಯಕ್ ರವರು, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಾ, ಕಳೆದ 10 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ವೇದಿಕೆಯ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿಯ ಜಿ. ಎಸ್. ಬಿ. ಸಮಾಜದ ಅರ್ಹ , ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಈವರೆಗೆ 935 ವಿದ್ಯಾರ್ಥಿಗಳಿಗೆ 1.5 ಕೋಟಿ ರೂಪಾಯಿ ವಿದ್ಯಾರ್ಥಿವೇತನದ ಪ್ರಯೋಜನವನ್ನು ವಿದ್ಯಾರ್ಥಿ ಸಮುದಾಯ ಪಡೆದುಕೊಂಡಿದೆ ಎಂದು ವಿವರಿಸಿದರು .

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಚಾಲಕರಾದ ಶ್ರೀ . ಆರ್ . ವಿವೇಕಾನಂದ ಶೆಣೈ ಅವರು ಸಮಾಜದ ಸಹೃದಯ ದಾನಿಗಳ ಸಹಕಾರದಿಂದ ವೇದಿಕೆಯ ಸಮಾಜಮುಖಿ

ಯೋಜನೆಗಳನ್ನು ಕುಟುಂಬ ಚೈತನ್ಯ ಯೋಜನೆಯ ಜೊತೆಗೆ ವಿದ್ಯಾಪೋಷಕ ನಿಧಿ ವಿತರಣಾ ಕಾರ್ಯಕ್ರಮವು, ಕೋವಿಡ್ ನಿರ್ಬಂಧದ ನಡುವೆಯೂ ಸರಳವಾಗಿ ಜುಲೈ 25, ಆದಿತ್ಯವಾರದಂದು , ಅಪರಾಹ್ನ 12:00 ರಿಂದ 01:30 ಗಂಟೆಯ ವರೆಗೆ ಮಂಗಳೂರಿನ ನಮ್ಮ ಕುಡ್ಲ ಸ್ಟುಡಿಯೋದಲ್ಲಿ ನಡೆಯಲಿರುವುದು. ಆ ದಿನ ಸಾಂಕೇತಿಕವಾಗಿ 10 ಮಂದಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನಾ ವಿತರಣೆ ನಡೆಯಲಿರುವುದು. ಉಳಿದ ೧೨೦ಮಂದಿ ವಿದ್ಯಾರ್ಥಿಗಳಿಗೆ ನೇರ ಖಾತೆ ವರ್ಗಾವಣೆ ಮಾಡಲಾಗುವುದು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ. ಬಿ . ಯೋಗೀಶ್ ಆಚಾರ್ಯ ರವರು ವಹಿಸಲಿದ್ದು ಅಮೆರಿಕಾದ ವಾಷಿಂಗ್ಟನ್ ಡಿ .ಸಿ ಯ, ಐಸಿಎಐ ಚ್ಯಾಪ್ಟರಿನ ಅಧ್ಯಕ್ಷರರಾದ ಸಿ ಎ ಗೋಕುಲದಾಸ್ ಪೈ ಯವರು ಉದ್ಘಾಟನೆಯನ್ನು ನೆರವೇರಿಸಲಿರುವರು.

ಸುಬ್ರಹ್ಮಣ್ಯ ಪ್ರಭು ರವರು ಸ್ವಾಗತಿಸಿದರು. ಪಿ ಸುರೇಶ ಶೆಣೈ ಯವರು ಧನ್ಯವಾದ ಸಮರ್ಪಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker