ಕರಾವಳಿ

ಶಿರ್ವಾ: ಟೆಂಪೋ ಮತ್ತು ಬಸ್ಸಿನ ಬ್ಯಾಟರಿ, ಡೀಸೆಲ್ ಕಳವು.!

ಶಿರ್ವಾ : ನಿಲ್ಲಿಸಿದ್ದ ಟೆಂಪೋ ಮತ್ತು ಬಸ್‍ಗಳಿಂದ ಬ್ಯಾಟರಿ ಹಾಗೂ ಡೀಸೆಲ್ ಕಳವು ಮಾಡಿರುವ ಘಟನೆ ಕುರ್ಕಾಲು ಗ್ರಾಮದ ಕುರ್ಕಾಲು ಪೆಟ್ರೋಲ್ ಬಂಕ್ ಆವರಣದಲ್ಲಿ ನಡೆದಿದೆ.

ಈ ಬಗ್ಗೆ ಮೊಹಮ್ಮದ್ ರಮೀಝ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಅ.13ರಂದು ಸಂಜೆ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಿದ್ದ ಮೊಹಮ್ಮದ್ ರಮೀಝ್ ಅವರ, 2 ಖಾಸಗಿ ಬಸ್, ಒಂದು ಟೆಂಪೋದ ಬ್ಯಾಟರಿ ಹಾಗೂ 40 ಲೀ. ಡೀಸೆಲ್ ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ 3 ಬ್ಯಾಟರಿ ಮತ್ತು 40 ಲೀಟರ್ ಡೀಸೆಲ್‍ನ ಒಟ್ಟು ಅಂದಾಜು ಮೌಲ್ಯ 41,000 ರೂ. ಆಗಿದೆ ಎಂದು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!