ರಾಜ್ಯ

ಚಿರಂಜೀವಿ ಸರ್ಜಾ ರವರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಚಿರಂಜೀವಿ ಸರ್ಜಾ ಅಕಾಲಿಕ ಮರಣ ಚಂದನವನ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವನ್ನೇ ದುಃಖದ ಮಡುವಿಗೆ ನೂಕಿದೆ. 35 ವರ್ಷದ ಚಿರು ದಿಢೀರ್ ಅಂತ ಇಹಲೋಕಯಾತ್ರೆ ಮುಗಿಸಿರುವುದು ನಿಜಕ್ಕೂ ದುಃಖಕರ ಸಂಗತಿ . ಚಿರು ಮರಣದಿಂದ ಅಭಿಮಾನಿಗಳು ಸೇರಿದಂತೆ ನಾಡಿಗೆ ನಾಡೇ ಕಂಬನಿ ಮಿಡಿಯುತ್ತಿದೆ . ಈ ನಡುವೆ ಚಿರು ಬಿಟ್ಟು ಹೋದ ಸಿನಿಮಾಗಳು ಕೂಡ ಸಾಕಷ್ಟಿವೆ ,ಕೆಲವು ಸಿನಿಮಾಗಳು ಅರ್ಧಕ್ಕೇ ನಿಂತಿವೆ ..!

2020ರಲ್ಲಿ ಖಾಕಿ, ಆದ್ಯ ಮತ್ತು ಶಿವಾರ್ಜುನ ಸಿನಿಮಾಗಳು ತೆರೆಕಂಡಿದ್ದವು . ಶಿವಾರ್ಜುನ ಸಿನಿಮಾ ರಿಲೀಸ್ ಆದ ಎರಡೇ ಎರಡು ದಿನಕ್ಕೆ ಲಾಕ್ ಡೌನ್ ದೆಸೆಯಿಂದ ಪ್ರದರ್ಶನ ಸ್ಥಗಿತಗೊಂಡಿತ್ತು . ಕೊರೋನಾ ಅವಾಂತರ ಕಮ್ಮಿಯಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಶಿವಾರ್ಜುನ ಸಿನಿಮಾವನ್ನು ರೀ ರಿಲೀಸ್ ಮಾಡುವ ಪ್ಲ್ಯಾನ್ ಇದೆ  . ಶಿವಾರ್ಜುನ ಸಿನಿಮಾದಲ್ಲಿ ಚಿರಂಜೀವಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ .

ಶಿವಾರ್ಜುನ ರಿಲೀಸ್ ಆದ ಬಳಿಕ ರಾಜಮಾರ್ತಾಂಡ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ . ಆದರೆ ರಾಜಮಾರ್ತಾಂಡ ಸಿನಿಮಾದ ಚಿತ್ರೀಕರಣ ಮುಗಿದಿದೆಯಾದರೂ ಇನ್ನೊಂದು ಸಾಂಗ್ ಗೆ ಚಿತ್ರತಂಡ ಪ್ಲ್ಯಾನ್ ಮಾಡಿತ್ತು . ಅಷ್ಟೊತ್ತಿಗೆ ಲಾಕ್ ಡೌನ್ ನಿಂದ ಚಿತ್ರೀಕರಣಗಳು ಸ್ಥಗಿತಗೊಂಡವು. ಈಗ ಲಾಕ್ ಡೌನ್ ಮುಗಿಯುವಷ್ಟರಲ್ಲಿ ಚಿರು ಈ ಜಗದ ಪಯಣ ಮುಗಿಸಿದ್ದಾರೆ . ಹೀಗಾಗಿ ಆ ಹಾಡನ್ನು ಶೂಟ್ ಮಾಡದೇ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ .

ಇನ್ನು ಕ್ಷತ್ರಿಯ ಸಿನಿಮಾದ ಮುಹೂರ್ತ ನಡೆದು 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು . ಅನಿಲ್ ಮಂಡ್ಯ ಈ ಚಿತ್ರದ ನಿರ್ದೇಶಕರು . .ರಚಿತಾ ರಾಮ್ ನಾಯಕಿಯಾಗಿರುವ ಏಪ್ರಿಲ್ ಎಂಬ ಸಿನಿಮಾಕ್ಕೆ ಚಿರಂಜೀವಿ ಸರ್ಜಾ ಸಹಿ ಮಾಡಿದ್ದರು . ಕಾರಣಾಂತರದಿಂದ ಚಿತ್ರೀಕರಣ ತಡವಾಗಿತ್ತು. ಇನ್ನೇನು ಸೆಟ್ಟೇರಬೇಕು ಅನ್ನುವಷ್ಟರಲ್ಲಿ ಚಿರು ಅಗಲಿದ್ದಾರೆ . ಈ ಸಿನಿಮಾದಲ್ಲಿ ಚಿರು ಮಾಡಬೇಕಾಗಿದ್ದ ಪಾತ್ರ ಯಾರು ಮಾಡುತ್ತಾರೆ ಎಂಬುದು ಕಾದು ನೋಡಬೇಕು .

ಇನ್ನು ಆ ದಿನಗಳು ಚೇತನ್ , ವರಲಕ್ಷ್ಮೀ ಶರತ್ ಕುಮಾರ್ ಅಭಿನಯದ ರಣಂ ಸಿನಿಮಾಗಳಲ್ಲಿ ಚಿರು ನಟಿಸಿದ್ದು, ಈ ಸಿನಿಮಾಗಳು ಸದ್ಯದಲ್ಲೇ ತರೆಕಾಣಲಿವೆ .ಧೀರಂ, ಅಶೋಕವನ ಎಂಬ ಸಿನಿಮಾಗಳ ಮಾತುಕತೆ ನಡೀತಾ ಇತ್ತು . ಲಾಕ್ ಡೌನ್ ನಂತರ ಸೆಟ್ಟೇರುವವಿದ್ದವು . ಮುಂದೆ ಈ ಸಿನಿಮಾಗಳನ್ನು ಚಿರು ಬದಲು ಯಾರ್ ಮಾಡ್ತಾರೆ ಅನ್ನೋದನ್ನು ನೋಡ್ಬೇಕು.

ಅದೇ ರೀತಿ ಹರಿಸಂತು ನಿರ್ದೇಶನದ ದೊಡ್ಡೋರ್ ಸಿನಿಮಾ ಕಥೆಯನ್ನು ಚಿರು ಬಹಳ ಇಷ್ಟಪಟ್ಟಿದ್ದರು . ಹೆಚ್ಚು ಬಜೆಟ್ ಬೇಕಾಗಿದ್ದರಿಂದ ಸಿನಿಮಾ ಪ್ರಾರಂಭವಾಗಲಿಲ್ಲ .5 ವರ್ಷದ ಹಿಂದೆಯೇ ಚಿತ್ರ ಒಪ್ಪಿದ್ದ ಚಿರು ಸೆಟ್ಟೇರೋದಕ್ಕೆ ಕಾಯ್ತಿದ್ರು . ಚಿತ್ರತಂಡ ರೆಫರೆನ್ಸ್ ಟ್ರೈಲರ್ ಮಾಡಿದ್ದು , ಚಿರು ಅದನ್ನು ಪದೇ ಪದೇ ನೋಡುತ್ತಿದ್ದರಂತೆ . ಇದನ್ನು ಚಿತ್ರತಂಡ ಚಿರುಗೆ ಅರ್ಪಿಸಿದೆ.

 

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker