ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ – ಸನ್ಮಾನ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

ಡಾll. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಮತ್ತು ಉಡುಪಿ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಶ್ರಯದಲ್ಲಿ ಇಂದು ದಿನಾಂಕ 24-07-2021 ರಂದು ನಡೆದ ಸನ್ಮಾನ ಸಮಾರಂಭದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಭಾಗವಹಿಸಿದರು.
ಸಮಾರಂಭದಲ್ಲಿ ವಸಂತರಾಜ್ ಶೆಟ್ಟಿ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು, ಪ್ರೊ. ಬಾಲಕೃಷ್ಣ ಹೆಗ್ಡೆ ನಿವೃತ್ತ ಪ್ರಾಂಶುಪಾಲರು, ಪ್ರೊ. ನಿತ್ಯಾನಂದ ಎನ್. ನಿವೃತ್ತ ಉಪನ್ಯಾಸಕರು ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ. ರಾಜಶೇಖರ್ ಹೆಬ್ಬಾರ್ ಪ್ರಾಂಶುಪಾಲರು ಲೀಡ್ ಕಾಲೇಜು, ದಕ್ಷಿಣ ಕನ್ನಡ, ಡಾll. ಗಣನಾಥ ಎಕ್ಕಾರ್ ಪ್ರಾಂಶುಪಾಲರು ಲೀಡ್ ಕಾಲೇಜು, ಉಡುಪಿ, ಡಾll. ಭಾಸ್ಕರ್ ಶೆಟ್ಟಿ ಎಸ್ ಪ್ರಾಂಶುಪಾಲರು ಡಾll. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ರಾಘವೇಂದ್ರ ಕಿಣಿ ಅಧ್ಯಕ್ಷರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಡಾll. ಶಂಕರ್ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳು, ರೋಷನ್ ಶೆಟ್ಟಿ ದೈಹಿಕ ಶಿಕ್ಷಕರು ಹಾಗೂ ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.