
ಮಥುರಾ: ನಗರದ ಕೃಷ್ಣ ಜನ್ಮಭೂಮಿಯಿಂದ ಶಾಹಿ ಇದ್ಗಾ ಮಸೀದಿಯನ್ನು ತೆರವು ಮಾಡುವಂತೆ ಮನವಿ ಮಾಡಿ ವಕೀಲ ವಿಷ್ಣು ಜೈನ್ ಎಂಬವರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ.
ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸಂಬಂಧಿಸಿದಂತೆ ಇರುವುದಾಗಿದೆ. ಈ ಭೂಮಿಯ ಮೇಲೆ ಕೃಷ್ಣ ಭಕ್ತರು ಪೂಜನೀಯ ಭಾವವನ್ನು ಹೊಂದಿದ್ದಾರೆ. ಆದ್ದರಿಂದ 13.37 ಎಕರೆ ಜಾಗವನ್ನು ಹಿಂದೂಗಳಿಗೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದರು. ಜೊತೆಗೆ ಈ ವಿಚಾರವಾಗಿ 1968 ರ ರಾಜಿ ಪತ್ರವನ್ನು ಒಪ್ಪಲಾಗದು ಎಂದೂ ಅವರು ತಿಳಿಸಿದ್ದರು.
ಮಥುರೆಯ ಕೃಷ್ಣ ದೇಗುಲವನ್ನು ಔರಂಗಜೇಬ ನಾಶಗೊಳಿಸಿದ ವಿಚಾರವನ್ನು ಇತಿಹಾಸ ಹೇಳುತ್ತದೆ. ಕೃಷ್ಣಾಲಯದ ಜೊತೆಗೆ ಇನ್ನಿತರ ದೇಗುಲಗಳನ್ನು ಆತ ನಾಶ ಮಾಡಿದ್ದ. ಈಗ ಇದ್ಗಾ ಮಸೀದಿ ಇರುವ ಪ್ರದೇಶವನ್ನು ಮತ್ತೆ ಹಿಂದೂಗಳಿಗೆ ನೀಡುವಂತೆ ಅವರು ತಮ್ಮ ದಾವೆಯಲ್ಲಿ ತಿಳಿಸಿದ್ದಾರೆ.
ಸೆಪ್ಟಂಬರ್ 30ರಂದು ಅರ್ಜಿಯ ಸಮರ್ಥನೀಯತೆಯ ಬಗ್ಗೆ ವಿಚಾರಣೆಯನ್ನು ನಡೆಸಲು ನಿರ್ಧರಿಸಲಾಗಿದೆ.