
ಉಡುಪಿ: 50+ ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣವಿರುವ ಗ್ರಾಮ ಪಂಚಾಯತ್ ಗಳನ್ನು ಸಿಲ್’ಡೌನ್ ಮಾಡಲಾಗಿದ್ದು ಜೂನ್ 7ಕ್ಕೆ ಅವಧಿ ಮುಕ್ತಾಯವಾಗಲಿದೆ.
ಇದೀಗ ಮುಂದುವರಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ ಜಗದೀಶ್ ಗ್ರಾಮಪಂಚಾಯತಿಗಳು ಸೀಲ್‍ಡೌನ್ ಮಾಡಿದ್ದು ಪರಿಣಾಮಕಾರಿಯಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರ ನೇತೃತ್ವದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ.ಸೀಲ್‍ಡೌನ್‍ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.
ಮಂಗಳವಾರ ಮತ್ತೆ ಶಾಸಕರು ಸಂಸದರ ಜೊತೆ ಚರ್ಚಿಸಿ ನಿರ್ಧಾರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.