ಕರಾವಳಿ

ಉಡುಪಿ : ರೋಬೋಸಾಫ್ಟ್ ಸಾಫ್ಟವೇರ್ ಕಂಪನಿ ಬರೋಬ್ಬರಿ 805 ಕೋಟಿ ರೂಪಾಯಿಗೆ ಸೇಲ್..!

25 ವರ್ಷಗಳ ಹಿಂದೆಯೇ ಕರಾವಳಿ ಭಾಗದಲ್ಲಿ ಸಾಫ್ಟ್‌ವೇರ್‌ ಕಂಪೆನಿಯೊಂದನ್ನು ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದ್ದ ಉಡುಪಿ ಮೂಲದ ರೋಬೋಸಾಫ್ಟ್‌ ಕಂಪೆನಿ ಬರೋಬ್ಬರಿ 805 ಕೋಟಿ ರೂಪಾಯಿಗೆ ಸೇಲ್‌ ಆಗಿದೆ.

ಕರಾವಳಿಯ ಹೆಮ್ಮೆಯ ಕಂಪೆನಿಯಾಗಿ, ಹಲವು ಮಂದಿ ಲೋಕಲ್ ಪ್ರತಿಭೆಗಳಿಗೆ ಉದ್ಯೋಗ ನೀಡಿದ್ದ ರೋಬೋಸಾಫ್ಟ್ ಕಂಪನಿ ಇದೀಗ ಪರ ರಾಷ್ಟ್ರದ ಪಾಲಾಗಿದೆ.

ಜಪಾನ್‌ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್‌ ಕಂಪೆನಿ ಉಡುಪಿಯ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಶನ್‌ ಸೆಲ್ಯೂಷನ್ಸ್‌ ಸಂಸ್ಥೆಯಾಗಿರುವ ರೋಬೋಸಾಫ್ಟ್‌ನ ಶೇ.100 ಷೇರು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.

ತಂತ್ರಾಂಶ ಅಭಿವೃದ್ದಿ ಆಪ್‌ಗಳ ನಿರ್ಮಾಣ ಸೇರಿದಂತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮಾಧ್ಯಮ ಲೋಕದಲ್ಲಿ ಮೊಬೈಲ್‌ ಆಪ್‌ಗಳನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆ ರೋಬೋಸಾಫ್ಟ್‌ಗೆ ಸಲ್ಲುತ್ತದೆ. ಕೇವಲ ಭಾರತ ಮಾತ್ರವಲ್ಲದೇ ಅಮೇರಿಕಾ, ಜಪಾನ್‌ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿದೆ.

 

1996ರಲ್ಲಿ ಉಡುಪಿಯ ರೋಹಿತ್‌ ಭಟ್‌ ಆರಂಭಿಸಿದ್ದ ರೋಬೋ ಸಾಫ್ಟ್‌ ಉಡುಪಿ ಜಿಲ್ಲೆಯ ಪಾಲಿನ ಮೊಲದ ಸಾಫ್ಟ್‌ವೇರ್‌ ಕಂಪೆನಿ. ಸಣ್ಣ ಮಟ್ಟದಲ್ಲಿ ಆರಂಭಗೊಂಡ ಕಂಪೆನಿಯಲ್ಲಿ ಇಂದು ಬರೋಬ್ಬರಿ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಪ್ರತಿಷ್ಠಿತ ಮೊಬೈಲ್‌ ಕಂಪೆನಿಗಳಲ್ಲೊಂದಾಗಿರುವ ಆಪಲ್‌ ಜೊತೆಗೂ ವ್ಯವಹಾರಿಕ ಸಂಬಂಧವನ್ನು ಹೊಂದಿದೆ.

ಜಪಾನ್‌ ಮೂಲದ ಟೆಕ್ನೋಪ್ರೋ ಸಂಸ್ಥೆಗೆ ರೋಬೋಸಾಫ್ಟ್‌ನ ಶೇಕಡಾ 100 ರಷ್ಟು ಶೇರುಗಳನ್ನು ಮಾರಾಟ ಮಾಡುವ ಕುರಿತು ಖುದ್ದು ರೋಬೋಸಾಫ್ಟ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಭಟ್‌ ಟ್ವೀಟ್‌ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದಲೂ ರೋಬೋಸಾಫ್ಟ್‌ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಇದೀಗ ಟೆಕ್ನೋಪ್ರೋ ನಂತಹ ಜಾಗತಿಕ ಸಾಫ್ಟ್‌ವೇರ್‌ ದೈತ್ಯ ಕಂಪೆನಿ ರೊಬೋಸಾಫ್ಟ್‌ ಖರೀದಿ ಮಾಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಉಡುಪಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ರೊಬೊಸಾಫ್ಟ್, ಬೆಂಗಳೂರು ಹಾಗೂ ಮುಂಬೈನಲ್ಲಿ ಡೆಲಿವರಿ ಕೇಂದ್ರ ಹಾಗೂ ಅಮೆರಿಕಾ, ಜಪಾನ್ ಸೇರಿದಂತೆ ಹಲವೆಡೆ ಮಾರಾಟ ಕೇಂದ್ರಗಳನ್ನು ಹೊಂದಿದೆ. 2008ರಲ್ಲಿ ಮೊಬೈಲ್ ಆ್ಯಪ್‌ಗಳನ್ನು ಸಿದ್ಧಪಡಿಸುವ ಮೂಲಕ ಜಾಗತಿಕವಾಗಿ ಉದ್ಯಮವನ್ನು ವಿಸ್ತರಿಸಿಕೊಂಡಿತ್ತು.

ರೋಬೋಸಾಫ್ಟ್‌ ಕಂಪೆನಿ ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಭರ್ಜರಿ 184 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಕಳೆದ ಸಾಲಿನಲ್ಲಿ 97.4ಕೋಟಿ ಲಾಭ ಗಳಿಸಿತ್ತು. ಆದರೆ ಈ ಬಾರಿ ತನ್ನ ಲಾಭದ ಪ್ರಮಾಣವನ್ನು ಶೇ.89 ರಷ್ಟು ಹೆಚ್ಚಳ ಮಾಡಿಕೊಂಡಿತ್ತು. ಇದೀಗ ಉಡುಪಿ ಮೂಲದ ಕಂಪೆನಿಯೊಂದು ಪ್ರಖ್ಯಾತ ಕಂಪೆನಿಯ ಪಾಲಾಗಿದೆ

ಸದ್ಯ ಚಾಲ್ತಿಯಲ್ಲಿರುವ ಆಡಳಿತ ಮಂಡಳಿಯೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲಿದೆ. ರವಿತೇಜ ಬೊಮಿರೆಡ್ಡಿ ಪಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ರೋಬೋಸಾಫ್ಟ್ ಟೆಕ್ನೋಲಜಿಸ್ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker