ಕರಾವಳಿ
ಬ್ರಹ್ಮಾವರ: ಕಾರಿಗೆ ಕಂಟೈನರ್ ಡಿಕ್ಕಿ- ನಾಲ್ವರು ಪವಾಡ ಸದೃಶವಾಗಿ ಪಾರು…!

ಬ್ರಹ್ಮಾವರ : ಫೋಟೋ ಶೂಟ್‌ಗೆಂದು ಹೋಗುತ್ತಿದ್ದ ಕಾರು ರಸ್ತೆಯಲ್ಲಿದ್ದ ಬೃಹತ್ ಹೊಂಡ ತಪ್ಪಿಸಲು ಹೋಗಿದ್ದ ಸಂದರ್ಭ ಹಿಂದಿನಿಂದ ಟೆಂಪೋ ಡಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಹೆರೂರು ಸೇತುವೆಯಲ್ಲಿ ನಡೆದಿದೆ.
ಮಂಗಳೂರಿನಿಂದ ಬ್ರಹ್ಮಾವರ ಸಕ್ಕರೆ ಕಾರ್ಖನೆ ಕಡೆ ವೇಗವಾಗಿ ಹೋಗುತ್ತಿದ್ದ ಬೊಲೆನೋ ಕಾರು ಹೇರೂರು ಸೇತುವೆಯಲ್ಲಿದ್ದ ಹೊಂಡ ತಪ್ಪಿಸುವುದಕ್ಕಾಗಿ ಬಲಕ್ಕೆ ತಿರುಗಿದಾಗ ಹಿಂದಿನಿಂದ ಬರುತ್ತಿದ್ದ ಟೆಂಪೋ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಪಾಯವಾಗಿಲ್ಲವೆಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.