
ಉಡುಪಿ:ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಾಡಿ ಗ್ರಾಮದಲ್ಲಿ ಆ.8ರಂದು ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ವಿಜಯಪುರ, ಇಂಡಿ ತಾಲೂಕಿನ ನಿವಾಸಿ ಅಮಿತ ಶಾಂತಪ್ಪ ನಾಗನಾಸುರ್(21) ಎಂಬುವವನನ್ನು ಬಂಧಿಸಿದ್ದಾರೆ. ಬಂಧಿತನಿಂದ 23 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 4000 ರೂಪಾಯಿ ಮೌಲ್ಯದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಪ್ರಾಣೇಶ್ ಎಂಬುವರ ಮನೆಯ ಹೆಂಚನ್ನು ತೆಗೆದು ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವುಗೈದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೋಟ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಪುಷ್ಪ, ಸಂತೋಷ್ ಬಿ.ಪಿ ನೇತೃತ್ವದಲ್ಲಿ ತನಿಖೆ ನಡೆದು, ಠಾಣೆಯ ಅಪರಾಧ ಪತ್ತೆದಳದ ಸಿಬ್ಬಂದಿ ಸುರೇಶ ಎಚ್, ಪ್ರಕಾಶ್ ಎಸ್.ರಾಜೇಶ್ ಆರೋಪಿಯನ್ನು ಕುಂದಾಪುರದಲ್ಲಿ ಬಂಧಿಸಿದ್ದಾರೆ.













