ಕರಾವಳಿ
ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಅವಗಡ ಸಂಭವಿಸದಂತೆ ಭದ್ರತೆ ಕೈಗೊಳ್ಳುವ ಬಗ್ಗೆ ಸಭೆ

ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಅವಗಡ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಟೂರಿಸ್ಟ್ ಬೋಟ್ ಮಾಲಕರು ಹಾಗೂ ಮಲ್ಪೆ ಬೀಚ್ ನಿರ್ವಾಹಕರೊಂದಿಗೆ ಇಂದು ದಿನಾಂಕ 30-04-2022 ರಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದ ರೀತಿಯಲ್ಲಿ ಸೂಕ್ತ ಭದ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಯಿತು.
ಶಾಸಕರಾದ ಕೆ ರಘುಪತಿ ಭಟ್ ಅಪರ ಜಿಲ್ಲಾಧಿಕಾರಿಗಳಾದ ವೀಣಾ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯಶ್ವಂತ್ ಪ್ರಭು ಹಾಗೂ ಟೂರಿಸ್ಟ್ ಬೋಟ್ ಮಾಲಕರು ಹಾಗೂ ಮಲ್ಪೆ ಬೀಚ್ ನಿರ್ವಾಹಕರು ಉಪಸ್ಥಿತರಿದ್ದರು.