
ಬೆಂಗಳೂರು: ದೆಹಲಿಯ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ & ಪಾಲಿಸಿ ಎನ್ನುವ ಸಂಸ್ಥೆ ಭಾರತದಾದ್ಯಂತ ಒಟ್ಟು 47,481 ವೆಂಟಿಲೇಟರ್ಸ್ ಗಳಿವೆ ಎಂದು ಅಂದಾಜಿಸಿದ್ದು, ಈ ಪೈಕಿ ಶೇ. 62ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಇವೆ . ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ದೇಶದಾದ್ಯಂತ ಒಟ್ಟು 17,850 ವೆಂಟಿಲೇಟರ್ಗಳು ಅಂದರೆ ಶೇ.32ರಷ್ಟು ಮಾತ್ರ ಇವೆ ಎಂದು ಸಂಸ್ಥೆ ಅಂದಾಜಿಸಿದೆ.
ದೇಶದಲ್ಲಿ ಅತೀ ಹೆಚ್ಚು ವೆಂಟಲೇಟರ್ಗಳು ಉತ್ತರ ಪ್ರದೇಶದಲ್ಲಿವೆ ಎಂದು ಹೇಳಿರುವ ಸಂಸ್ಥೆ, ಯುಪಿಯಲ್ಲಿ ಒಟ್ಟು 7,035 ವೆಂಟಿಲೇಟರ್ಗಳಿವೆ ಎಂದು ತಿಳಿಸಿದೆ. ಕರ್ನಾಟಕ ಅತೀ ಹೆಚ್ಚು ವೆಂಟಿಲೇಟರ್ಸ್ ಗಳಿವೆ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಟ್ಟು 6, 653 ವೆಂಟಿಲೇರ್ಗಳಿದ್ದು, ಈ ಪೈಕಿ 4,810 ವೆಂಟಿಲೇರ್ಗಳು ಶೇ.73 ಖಾಸಗಿ ಆಸ್ಪತ್ರೆಗಳಲ್ಲಿವೆ.