
ಬೈಂದೂರು : covid-19 ಸಲುವಾಗಿ ರೋಗ ನಿರೋದಕ ಶಕ್ತಿ ಹೆಚ್ಚಿಸುವ ಆಯುಷ್ ಕಿಟ್ ಗಳನ್ನು ಹಲವಡೆ ವಿತರಿಸಲಾಯಿತು. ಬೈಂದೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ), ಯಡ್ತರೆ ಹಾಗೂ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಗೂ ಕಿಟ್ ಹಂಚಿಲಾಯಿತು. ಮತ್ತು ಕಿರು ಮಂಜೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯಾರಿಗೂ ಕಿಟ್ ಗಳನ್ನು ವಿತರಿಸಿ, ಆರ್ಯುವೇದ ಕೆಲವು ಕಷಾಯ ಮತ್ತು ಉಪಯೋಗಗಳ ಬಗ್ಗೆ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಗಳಾದ ಡಾ.ವೀಣಾ ಕಾರಂತ್ ರವರು ಔಷಧ ತೆಗೆದುಕೊಳ್ಳುವ ರೀತಿ ಹಾಗೂ ಕೋವಿಡ್-19 ಬಗ್ಗೆ ಮಾಹಿತಿ ನೀಡಿದರು.