
ಉಡುಪಿ: ಭಾರೀ ಸಂಚಲನ ಮೂಡಿಸಿದ್ದ ಉಡುಪಿಯ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಉಡುಪಿಯ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜೀವಿತಾವಧಿ ಶಿಕ್ಷೆ ಆಗಿದ್ದು ಹಳೆ ಸುದ್ದಿ. ಇದೀಗ ಹತ್ಯೆ ಪ್ರಕರಣದ ಅಪರಾಧಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದು ಲೇಟೆಸ್ಟ್ ಸುದ್ದಿ.
ಕೊಲೆಯ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರನಿಗೆ ನೀಡಿರುವ ಶಿಕ್ಷೆ ತೀರ್ಪು ತಡೆಹಿಡಿಯಲು ಮೇಲ್ಮನವಿ ಸಲ್ಲಿಸಿದ್ದಾರೆ.
5 ವರ್ಷಗಳ ಹಿಂದೆ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ ಮತ್ತು ಮಗ ನವನೀತ್ ಜ್ಯೋತಿಷಿ ನಿರಂಜನ್ ಸಹಕಾರದೊಂದಿಗೆ ಹತ್ಯೆಗೈದಿದ್ದರು. ಆರೋಪಿಗಳಿಗೆ ಜೂನ್ 8 ರಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಿತಾವಧಿ ಶಿಕ್ಷೆ ಪ್ರಕಟಿಸಿತ್ತು. ಆದರೆ ಈ ತೀರ್ಪಿಗೆ ತಡೆಕೋರಿ ತಾಯಿ ಮತ್ತು ಮಗನಿಂದ ಮೇಲ್ಮನವಿ ಸಲ್ಲಿಕೆಯಾಗಿದೆ. ಸದ್ಯ ಆರೋಪಿಗಳು ಜೈಲು ಸೇರಿದ್ದಾರೆ .