ಕರಾವಳಿ

ಮಂಗಳೂರು: ಮತ್ತೊಂದು ಪುರಾತನ ಬಾವಿ ಪತ್ತೆ!

ಮಂಗಳೂರು: ನಗರದ ಡೊಂಗರಕೇರಿ ಸಮೀಪದ ಅಶ್ವತ್ಥ ಕಟ್ಟೆ ಬಳಿ ಪುರಾತನ ಬಾವಿ ಪತ್ತೆಯಾಗಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ನಡೆಯುತ್ತಿರುವ ವೇಳೆಯಲ್ಲಿ ನಗರದಲ್ಲಿ ಈವರೆಗೆ ನಾಲ್ಕು ಪುರಾತನ ಬಾವಿಗಳು ಪತ್ತೆಯಾದಂತಾಗಿದೆ.

ಡೊಂಗರಕೇರಿ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಯಡಿ ರಸ್ತೆ ಹಾಗೂ ಫುಟ್ ಪಾತ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಫುಟ್ ಪಾತ್ ವ್ಯವಸ್ಥೆಗೆಂದು ಅಗೆಯುವ ಸಂದರ್ಭದಲ್ಲಿ ಈ ಬಾವಿ ಪತ್ತೆಯಾಗಿದೆ‌. ಸುಮಾರು ೫೦ ಅಡಿ ಆಳ ಇರುವ ಈ ಬಾವಿ ಸುಸ್ಥಿಯಲ್ಲಿದ್ದು, ಬಾವಿ ತುಂಬಾ ನೀರಿದೆ. ಬಾವಿಯನ್ನು ಕೆಂಪು ಕಲ್ಲಿನಿಂದ  ಕಟ್ಟಿದ್ದಾರೆ .

ಹಿಂದೆ ಅಲ್ಲಿನ ಸಾಕಷ್ಟು ಮನೆಗಳ ಮಂದಿ ಈ ಬಾವಿ ನೀರನ್ನೇ ಆಶ್ರಯಿಸುತ್ತಿದ್ದರು‌. ಆದರೆ ಮಂಗಳೂರಿಗೆ ನಳ್ಳಿ ನೀರು ಬಂದ ಬಳಿಕ ಈ ಬಾವಿಯನ್ನು ಬಳಕೆ ಮಾಡುತ್ತಿಲ್ಲ . ಅಲ್ಲದೆ ಒಂದಿಬ್ಬರು ಮಂದಿ ಇದೇ ಬಾವಿಗೆ ಆತ್ಮಹತ್ಯೆ ಮಾಡಿಕೊಂಡದ್ದೂ ಇದೆಯಂತೆ. ಹಾಗಾಗಿ 1969ರಲ್ಲಿ ಬಾವಿಯನ್ನು ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು. ಇದೀಗ ಈ ಬಾವಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ವೇಳೆ ಪತ್ತೆಯಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker