ಕರಾವಳಿ
ನಿಟ್ಟೂರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಶೂ ವಿತರಿಸುವ ಮೂಲಕ ಶಾಸಕ ರಘುಪತಿ ಭಟ್ ಅವರ ತಾಯಿಯ 83ನೇ ಜನ್ಮದಿನ ಆಚರಣೆ

ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರ ತಾಯಿ ಸರಸ್ವತಿ ಬಾರಿತ್ತಾಯ ಅವರ 83ನೇ ಜನ್ಮದಿನದ ಪ್ರಯುಕ್ತ ಇಂದು ದಿನಾಂಕ 29-08-2022 ರಂದು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಶೂ ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ತಾಯಿ ಸರಸ್ವತಿ ಬಾರಿತ್ತಾಯ, ಕುಟುಂಬದವರಾದ ದಾಮೋದರ ಬಾರಿತ್ತಾಯ, ರಮೇಶ್ ಬಾರಿತ್ತಾಯ, ಶಾಂತ, ಜಯಶ್ರೀ, ಗಾಯತ್ರಿ ಬಾರಿತ್ತಾಯ, ಶಾಂತಾರಾಮ್ ಭಟ್, ಮಂದಾಕಿಣಿ ಭಟ್, ಪ್ರೇಮಾ ಭಟ್, ಸತೀಶ್ ಭಟ್, ಶಿಲ್ಪಾ ಆರ್ ಭಟ್, ರಾಹುಲ್, ರಾಕೇಶ್, ರೆಯ್ಯಾನ್ಶ್, ಶಾಲೆಯ ಸಂಚಾಲಕರಾದ ಬ್ರಿಜಿತ್ ಕರ್ನೇಲಿಯೊ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಸದಾನಂದ, ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ಉಪಸ್ಥಿತರಿದ್ದರು.