
ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅಥ್ಲೀಟ್ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೊದಲ ಸುತ್ತಿನಲ್ಲಿ 87.03ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಅಗ್ರ ಸ್ಥಾನವನ್ನು ಚೋಪ್ರಾ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ತನ್ನ ಸಾಧನೆಯನ್ನೇ ಉತ್ತಮಪಡಿಸಿದ ಚೋಪ್ರಾ 87.58 ಮಿ ದೂರ ಎಸೆದರು.
ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿರುವ 23ರ ಹರೆಯದ ಸುಬೇದಾರ್ ನೀರಜ್ ಚೋಪ್ರಾ ಭಾರತಕ್ಕೆ ಸ್ವರ್ಣದ ಬಾಗಿಲನ್ನು ತೆರೆದಿದ್ದಾರೆ.