
ದಂಬೆಲ್ ಫ್ರೆಂಡ್ಸ್(ರಿ) ದಂಬೆಲ್ ಇದರ ವಾರ್ಷಿಕ ಮಹಾಸಭೆಯು ದಂಬೆಲ್ ಫ್ರೆಂಡ್ಸ್ ಕಚೇರಿಯಲ್ಲಿ ದಿನಾಂಕ 01.08.2021ರಂದು ನಡೆಯಿತು. 2021-22ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪುಷ್ಪರಾಜ್ ಪಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಆನಂದ್ ದೇವಾಡಿಗ, ಉಪಾಧ್ಯಕ್ಷರಾಗಿ ಯಶವಂತ್, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ , ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಕುಮಾರ್ ,ಲೆಕ್ಕಪರಿಶೋಧಕರಾಗಿ ಶ್ರೀನಿಧಿಶ್, ಜೊತೆ ಲೆಕ್ಕಪರಿಶೋಧಕರಾಗಿ ಪ್ರಶಾಂತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್.
ಡಿ, ಕ್ರೀಡಾ ಕಾರ್ಯದರ್ಶಿಯಾಗಿ ನಿತೇಶ್ ಇವರು ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂತೋಷ್ ಕುಮಾರ್, ಕಿರಣ್ ಕುಮಾರ್, ಹರೀಶ್, ರಂಜಿತ್ ಕೆ, ಪ್ರವೀಣ್ ಡಿ’ಸೋಜ, ಪುಷ್ಪರಾಜ್ ಪಿ, ರವಿರಾಜ್ ಪಿ ಆಯ್ಕೆಯಾಗಿರುತ್ತಾರೆ.