
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರದ ಚೇರ್ಕಾಡಿ ಮುಖ್ಯರಸ್ತೆಯಿಂದ ಬೆನಗಲ್ – ಮೊಗವೀರ ಪೇಟೆ – ಕೊಕ್ಕರ್ಣೆ ವರೆಗಿನ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ರೂ. 8 ಕೋಟಿ ಮಂಜೂರಾಗಿದ್ದು, ಇಂದು ದಿನಾಂಕ 10-08-2021 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಭಟ್, ಉಪಾಧ್ಯಕ್ಷರಾದ ಕಿಟ್ಟಪ್ಪ ಅಮೀನ್, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ಹಾಗೂ ಪಿ.ಎಂ.ಜಿ.ಎಸ್.ವೈ ಸಹಾಯಕ ಅಭಿಯಂತರರಾದ ತ್ರಿನೇಶ್, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಚೇರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರು, ಕೊಕ್ಕರ್ಣೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗುತ್ತಿಗೆದಾರರಾದ ಜೀವನ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.