ರಾಷ್ಟ್ರೀಯ

ಪೆಟ್ರೋಲ್ – ಡೀಸೆಲ್ ದರ ಮತ್ತೆ ಹೆಚ್ಚಳ

ನವದೆಹಲಿ, ಮೇ.23 :ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ಇಂದು ಪೆಟ್ರೋಲ್‌‌‌‌‌ ಬೆಲೆಯಲ್ಲಿ 15-17 ಪೈಸೆ, ಡೀಸೆಲ್‌‌ ಬೆಲೆಯಲ್ಲಿ 25-29 ಪೈಸೆಯಷ್ಟು ಹೆಚ್ಚಳವಾಗಿದೆ.

ದರ ಏರಿಕೆ ಬಳಿಕ ದೆಹಲಿಯಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ 93.21 ರೂ., ಡೀಸೆಲ್‌ ಬೆಲೆ 84.07 ರೂ. ಆಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ದರ 99.49 ರೂ. ಆಗಿದ್ದು, ಡೀಸೆಲ್​ ದರ 91.30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 96.31 ರೂ. ಗೆ ಹೆಚ್ಚಳವಾಗಿದ್ದು, ಡೀಸೆಲ್​ ಬೆಲೆ 89.12 ರೂ. ಆಗಿದೆ. ಹೈದರಾಬಾದ್​ನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 96.88 ರೂ. ಗೆ ಏರಿಕೆಯಾಗಿದ್ದು, ಒಂದು ಲೀಟರ್​ ಡೀಸೆಲ್​ ದರ 91.65 ರೂ. ಗೆ ಹೆಚ್ಚಳವಾಗಿದೆ.

ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 94.86 ರೂ. ಆಗಿದ್ದು,​ ಡೀಸೆಲ್​ ಬೆಲೆ 88.87 ರೂ. ಆಗಿದೆ. ಕೋಲ್ಕತ್ತಾದಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 93.27 ರೂ. ಆಗಿದ್ದು, ಒಂದು ಲೀಟರ್​ ಡೀಸೆಲ್​ ಬೆಲೆ 86.91 ರೂ.ಗೆ ಹೆಚ್ಚಳವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!