ಕರಾವಳಿ
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೇರ ಸಾಲ ಅಭಿವೃದ್ಧಿ ಯೋಜನೆಯಡಿ ಶಾಸಕ ರಘುಪತಿ ಭಟ್ ಅಟೋ ರಿಕ್ಷಾ ಹಸ್ತಾಂತರ

ಅಂಬೇಡ್ಕರ್ ಅಭಿವೃದ್ಧಿ ನಿಗಮದ 2021-22 ನೇ ಸಾಲಿನ ಉದ್ಯಮ ಶೀಲತಾ ನೇರಸಾಲ ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಜಾರು ರಾಜೀವ ನಗರದ ನಿವಾಸಿ ಶ್ಯಾಮ್ ರವರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ಆಟೋ ರಿಕ್ಷಾ ಮಂಜೂರಾಗಿದ್ದು, ಇಂದು ದಿನಾಂಕ 09-05-2022 ರಂದು ಉಡುಪಿ ಶಾಸಕರ ಕಚೇರಿಯಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಅಟೋ ರಿಕ್ಷಾದವನನ್ನು ಫಲಾನುಭವಿಗೆ ಹಸ್ತಾಂತರಿಸಿದರು.*
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಸದ್ಯಸರುಗಳಾದ ಸತೀಶ್ ನಾಯ್ಕ್, ನವೀನ್ ಕಾಂಚನ್, ವಿಶು ಕುಮಾರ್, ಪಕ್ಷದ ಹಿರಿಯರಾದ ಅಪ್ಪು ಜತ್ತನ್ ಉಪಸ್ಥಿತರಿದ್ದರು.