ಜೆಸಿಐ ಉಪ್ಪಂದಕ್ಕೆ ಔಟ್ ಸ್ಟ್ಯಾಂಡಿಂಗ್ ಅವಾರ್ಡ್ಸ್ ಹಾಗೂ ಚಾಂಪಿಯನ್ ಆಪ್ ಚಾಂಪಿಯನ್ ಪ್ರಶಸ್ತಿ

ಜೆಸಿಐ ಉಪ್ಪಂದಕ್ಕೆ ಔಟ್ ಸ್ಟ್ಯಾಂಡಿಂಗ್ ಅವಾರ್ಡ್ಸ್ ಹಾಗೂ ಚಾಂಪಿಯನ್ ಆಪ್ ಚಾಂಪಿಯನ್ ಪ್ರಶಸ್ತಿ ವಿಟ್ಲದಲ್ಲಿ ನಡೆದ ಜೆಸಿಐ ಭಾರತ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪ್ಪುಂದ ಜೇಸಿ ಘಟಕ ಈ ವರ್ಷ ಜೇಸಿಐ ಭಾರತ ಫೌಂಡೇಶನ್ ಗೆ ನೀಡಿದ ದೇಣಿಗೆ ಹಾಗೂ ಸದಸ್ಯತ್ವ ವಿಭಾಗದಲ್ಲಿ ತೋರಿದ ಬೆಳವಣಿಗೆಯನ್ನು ಪರಿಗಣಿಸಿ ವಲಯ 15ರ ಔಟ್ ಸ್ಟ್ಯಾಂಡಿಂಗ್ ಘಟಕ ಪ್ರಶಸ್ತಿ ಹಾಗೂ ಚಾಂಪಿಯನ್ ಅಪ್ ಚಾಂಪಿಯನ್ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಜೆಸಿಐ ಸೆನೆಟರ್ ರಾಕಿ ಜೈನ್ ಪ್ರಧಾನಿಸಿ ಗೌರವಿಸಿದರು .
ಈ ಸಂಧರ್ಭದಲ್ಲಿ ವಲಯ 15ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ
ರಾಷ್ಟ್ರೀಯ ನಿರ್ದೇಶಕರಾದ Jc ಕಾರ್ತಿಕೇಯ ಮಧ್ಯಸ್ಥ
ಹಾಗೂ ವಲಯ ಉಪಾಧ್ಯಕ್ಷರಾದ JFS.ದೇವರಾಯ ದೇವಾಡಿಗ, ಜೆಸಿಐ ಉಪ್ಪುಂದದ ಜೇಸಿ ಸೆನೆಟರ್ ಯು. ಪ್ರಕಾಶ್ ಭಟ್ ಹಾಗೂ ವಲಯಾಧಿಕಾರಿಯಾದ ಸುಬ್ರಹ್ಮಣ್ಯ. ಜಿ .ಉಪ್ಪುಂದ JFP.ಪ್ರದೀಪ್ ಶೆಟ್ಟಿ ಕಾರಿಕಟ್ಟೆ, JFM.ನಾಗಾರಾಜ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು