ಕರಾವಳಿ
ನೇಣು ಬಿಗಿದು ದಂಪತಿ ಆತ್ಮಹತ್ಯೆ..!

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಸಮೀಪದ ಚಿತ್ರಾಪುರದಲ್ಲಿರುವ ವಿಲಾಸಿ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದ ದಂಪತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಮುದ್ರ ತೀರದಲ್ಲಿರುವ ಈ ಅಪಾರ್ಟ್ ಮೆಂಟ್, ಮಂಗಳೂರಿನ ದುಬಾರಿ ಅಪಾರ್ಟ್ ಮೆಂಟ್ ಗಳಲ್ಲಿ ಒಂದಾಗಿದೆ.
ರಮೇಶ್ ಕುಮಾರ್ ಮತ್ತು ಅವರ ಪತ್ನಿ ಗುಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಡೆತ್ ನೋಟ್ ನಲ್ಲಿ ಅವರು ಕೊರೋನಾದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.