ರಾಷ್ಟ್ರೀಯ
ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಮತ್ತೆ 23 ಮಂದಿ ಸಾವು, 29 ಮಂದಿಗೆ ಗಾಯ

ಲಕ್ನೊ: ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೊರೋನಾ ಭೀಕರತೆಗಿಂತ ಸಿಡಿಲು ಬಡಿದು ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ನಿನ್ನೆ ಮತ್ತೆ ಮಿಂಚು ಬಡಿದು ಉತ್ತರ ಪ್ರದೇಶದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದು 29 ಮಂದಿ ಗಾಯಗೊಂಡಿದ್ದಾರೆ.
ಅಲಹಾಬಾದ್ ಜಿಲ್ಲೆಯಲ್ಲಿ 8 ಮಂದಿ, 6 ಮಂದಿ ಮಿರ್ಜಾಪುರದಲ್ಲಿ, ಬಡೊಹಿ ಜಿಲ್ಲೆಯಲ್ಲಿ 6 ಮಂದಿ, ಕೌಶಂಬಿ ಜಿಲ್ಲೆಯಲ್ಲಿ ತಲಾ ಇಬ್ಬರು ಮತ್ತು ಒಬ್ಬರು ಜೌನ್ಪುರ್ ಜಿಲ್ಲೆಯಲ್ಲಿ ಗುಡುಗು, ಮಿಂಚಿನಿಂದ ಮೃತಪಟ್ಟಿದ್ದಾರೆ. ಜೊತೆಗೆ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ 9 ಮಂದಿ, ಮಿರ್ಜಾಪುರದಲ್ಲಿ 10 ಮಂದಿ, ನಾಲ್ವರು ಕೌಶಂಬಿಯಲ್ಲಿ ಗುಡುಗು ಬಡಿದು ಗಾಯಗೊಂಡಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ. ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ಆತಂಕ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.