ಕರಾವಳಿ
ಅರುಣೋದಯ ಯುವಕ ಸಂಘ ಬಾಚನಬೈಲು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

ಉಡುಪಿ: ಅರುಣೋದಯ ಯುವಕ ಸಂಘ ರಿ. ಬಾಚನಬೈಲು ಕೊಡವೂರು ವತಿಯಿಂದ ಸಂಘದ ಸದಸ್ಯರು ಹಾಗೂ ಊರ ಪರವೂರ ದಾನಿಗಳಿಂದ ಸಂಗ್ರಹಿಸಿದ ಸಮಾರು 22 ಸಾವಿರ ರೂಪಾಯಿಯ ದಿನಬಳಕೆಯ ವಸ್ತುಗಳನ್ನು ‘ಮಮತೆಯ ತೊಟ್ಟಿಲು’ ಇಲ್ಲಿಗೆ ನೀಡುವ ಮೂಲಕ ದೀಪಾವಳಿಯನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗೌರವಾಧ್ಯಕ್ಷರಾದ ಭಾಸ್ಕರ್ ಪಾಲನ್, ಅಧ್ಯಕ್ಷರಾದ ಭರತ್
ಭೂಷಣ್, ಕಾರ್ಯದರ್ಶಿ ದೀಪಕ್ ಶೆಟ್ಟಿ ಹಾಗೂ ಸಂಘದ
ಸದಸ್ಯರು ಉಪಸ್ಥಿತರಿದ್ದರು.