
ಇಂದು ಮಣಿಪಾಲ ರಜತಾದ್ರಿ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಲೋಕಸಭಾ ಸಂಸದರಾದ ಮಾನ್ಯ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರು ಮಹಾರಾಷ್ಟ್ರದಿಂದ ದಿನೇ ದಿನೇ ಜನರು ಆಗಮಿಸುತ್ತಿದ್ದು ಇವರನ್ನು ಇನ್ಸ್ಟಿಟ್ಯೂಷನ್ ಅಥವಾ ಹೊಂ ಕ್ವಾರೈಂಟೈನ್ ಮಾಡುವಂತೆ ಸರ್ಕಾರ ಆದೇಶಿಸಿದ್ದು, ಮಹಾರಾಷ್ಟ್ರದಿಂದ ಬಂದವರನ್ನು ಸ್ವೀಕೃತಿ ಕೇಂದ್ರದಿಂದ ಇನ್ಸ್ಟಿಟ್ಯೂಷನ್ ಕ್ವಾರೈಂಟೈನ್ ಹಾಗೂ ಹೊಂ ಕ್ವಾರೈಂಟೈನ್ ಗಳಿಗೆ ತೆರಳಲು ಜನರು ಬಾಡಿಗೆ ರಿಕ್ಷಾಗಳನ್ನು ಬಳಸುತ್ತಿರುವುದು ಗಮನಕ್ಕೆ ಬಂದಿರುತ್ತದೆ ಇದರಿಂದ ಕರೋನ ವೈರಸ್ ಸಾಮೂಹಿಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದಲೇ ಪ್ರತಿ ತಾಲೂಕಿನ ಸ್ವೀಕೃತಿ ಕೇಂದ್ರದಿಂದ ಕನಿಷ್ಠ ಎರಡು ವಾಹನಗಳನ್ನು ಕ್ವಾರೈಂಟೈನ್ ಸ್ಥಳಗಳಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದಿಂದ ಇದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.