ಬೆಸೆಂಟ್ ಮಹಿಳಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಕೇಂದ್ರ ಬಜೆಟ್ 2022 ಕಾರ್ಯಾಗಾರ

02-03-2022ರಂದು ಬೆಸೆಂಟ್ ಮಹಿಳಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಕೇಂದ್ರ ಬಜೆಟ್ 2022ರ ಬಗ್ಗೆ ಕಾರ್ಯಾಗಾರ ನಡೆಯಿತು. ಮಂಗಳೂರಿನ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ ಎ ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಧೀರ್ಘ ಕಾಲಿನ ಪ್ರಭಾವ ಇರುವ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಬಜೆಟ್ ಎಂದು ತಿಳಿಸಿದರು. ನ್ಯಾಯವಾದಿ ಹಾಗೂ ನೋಟರಿ ಶ್ರೀ ಸತೀಶ್ ಕುಮಾರ್ ಭಟ್ ಅವರ ಅಧ್ಯಕ್ಷೀಯ ಭಾಷಣದಲ್ಲಿ ಬಜೆಟಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆಯನ್ನು ತಿಳಿಸಿದರು.
ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಸಿ ಎ ಎಸ್ ಎಸ್ ನಾಯಕ್ ಅವರು ತೆರಿಗೆಗೆ ಸಂಬಂಧ ಪಟ್ಟ ಬದಲಾವಣೆಗಳ ಬಗ್ಗೆ ಹಾಗೂ ಸರ್ವ ಕ್ಷೇತ್ರಗಳ ಯೋಜನೆಗಳ ಬಗ್ಗೆ ವಿಶ್ಲೇಷಿಸಿದರು. ಆರ್ಥಿಕ ತಜ್ಞರಾದ ಶ್ರೀ ಸಿ ಎ ಡಿ ಬಿ ಮೆಹ್ತಾರವರು ಬಜೆಟ್ ನಲ್ಲಿ ನಮೂದಿಸಿದ ಬ್ರಹತ್ ಮೂಲಭೂತ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಸಂಬಂಧ ಪಟ್ಟ ಯೋಜನೆಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ಬ್ಯಾಂಕಿಂಗ್ ತಜ್ಞರಾದ ಶ್ರೀ ಜೀವನ್ ದಾಸ್ ನಾರಾಯಣ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಲಿರುವ ಬದಲಾವಣೆಗಳ ಬಗ್ಗೆ ಚರ್ಚಿಸಿದರು. ಶ್ರೀ ರಾಜೇಶ್ ರಾವ್ ಅವರು ಮಾತನಾಡುತ್ತಾ ಬಜೆಟ್ ನಿಂದಾಗಿ ಭಾರತದಲ್ಲಿ ವ್ಯಾಪಿಸುವ ಡಿಜಿಟಲೀಕರಣದ ಬಗ್ಗೆ ಬೆಳಕು ಚೆಲ್ಲಿದರು. ಶ್ರೀ ಸಿ ಎ ಎಂ ಏನ್ ಪೈ ರವರು ಕಾರ್ಯಾಗಾರದ ಸಂಯೋಜಕರಾಗಿದ್ದರು. ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಅವರು ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಸಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಿ ನಾರಾಯಣ ಭಟ್ ವಂದನಾರ್ಪಣೆ ಸಲ್ಲಿಸಿದರು.