
ಶ್ರೀನಿವಾಸ ದೇವರ ಮೂರ್ತಿ ಎದುರು ಭಕ್ತಿಯಿಂದ ಕೈಮುಗಿದು ನಿಲ್ಲುತ್ತೇವೆ. ನಮಗೆ ಬಂದಂತಹ ಸಂಕಷ್ಟ ಪರಿಹಾರಿಸಿಕೊಡಪ್ಪಾ ಎನ್ನುತ್ತೇವೆ. ಮುಂದೆ ಕಷ್ಟ ಬಾರದಂತೆ ಕಾಪಾಡಪ್ಪ ಎಂದೋ ಇನ್ನೂ ಏನೇನೋ ಭಕ್ತಿಯಿಂದ ಬೇಡಿಕೊಳ್ಳುತ್ತೇವೆ. ಆದರೆ ಗರ್ಭ ಗುಡಿಯ ಶ್ರೀನಿವಾಸ ಬೇಡಿ ಬಂದ ಭಕ್ತರಿಗೆ ಕೂಡಲೇ ಒಲಿದು ಆ ಕ್ಷಣದಲ್ಲಿ ಪರಿಹಾರ ನೀಡಿಯೇ ಬಿಡುತ್ತಾನೆ ಎಂದು ನಂಬಿ ಕುಳಿತಿರಲು ಸಾಧ್ಯವಿಲ್ಲ. ಆದರೆ ಕರ್ನಾಟಕ ರಾಜ್ಯ ಸಚಿವ ಶ್ರೀನಿವಾಸ ಪೂಜಾರಿ ಬೇಡಿದ ತಕ್ಷಣ ಅದಕ್ಕೊಂದು ಪರಿಹಾರ ನೀಡುವ ಬಗ್ಗೆ ಯಾವುದೇ ಅನುಮಾನ ಬೇಡ. ಇವತ್ತಿನ ಒಂದು ನನ್ನ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುವದು ಯಾಕೆ ? ಒಂದು ಸಹಾಯಕ್ಕಾಗಿ ಅನೇಕರಿಗೆ ಸಂಘಟನೆಯ ಮುಖ್ಯಸ್ಥರಿಗೆ , ಸ್ಥಳೀಯ ಶಾಸಕರುಗಳಿಗೆ, ಜಿಲ್ಲಾಡಳಿತದ ಕಚೇರಿಗೆ ಹೀಗೆ ಅನೇಕ ಕಡೆ ಹತ್ತಾರು ಸಲ ನಿರಂತರವಾಗಿ ಫೋನ್ ಮಾಡಿದೆ ಆದರೆ ಕೆಲವರು ಬಿಡುವಿಲ್ಲದ ಕೆಲಸ ಅಂದರು ಇನ್ನು ಕೆಲವು ಅಧಿಕಾರಿಗಳು ನಾವು ಕೊರೋನಾ ಪೀಡಿತರಿಗೆ ಮಾತ್ರ ನೋಡಿಕೊಳ್ಳುವದು ಅದನ್ನು ಹೊರತುಪಡಿಸಿ ಬೇರೆ ಯಾವುದೇ ಸಹಾಯ ನಮ್ಮ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉಢಾಪೆಯ ಉತ್ತರ ನೀಡಿದರು . ಆಗ ನನ್ನ ಉಡುಪಿಯ ಮಿತ್ರ ” ಉಡುಪಿ ನ್ಯೂಸ್ ” ವೆಬ್ಸೈಟ್ ನ ಮುಖ್ಯ ಸಂಚಾಲಕರು ನೀವು ಯಾರು ಯಾರನ್ನೋ ಕೇಳುವ ಬದಲು ಶ್ರೀನಿವಾಸ ಪೂಜಾರಿ ಅವರ ಕೇಳಿದ್ದರೆ ನಿಮ್ಮ ಕೆಲಸ ಇಷ್ಟು ಹೊತ್ತಿಗೆ ಆಗುತ್ತಿತ್ತು. ಈಗಲೂ ತಡಮಾಡಬೇಡಿ ಅವರ ಮೊಬೈಲ್ ಸಂಪರ್ಕದ ನಂಬರ್ ಕೊಡತೇನೆ ಕಾಲ್ ಮಾಡಿ ವಿಷಯ ತಿಳಿಸಿ ಎಂಬ ಸಲಹೆ ನೀಡಿದರು . ಸರಿ ನಂಬರ್ ಪಡೆದು ಕೊಂಡೆ.
ಯಾರಿಗೆ ಯಾವ ಸಮಸ್ಯೆ ?
ಒಬ್ಬಾಕೆ ಹಾಸನದಿಂದ ಕುಮಟಾಕ್ಕೆ ಬರಲು ಹಾಸನದಿಂದ ನೇರವಾದ ಬಸ್ ಕುಮಟಾಕ್ಕೆ ಇಲ್ಲದ ಕಾರಣ ಮಂಗಳೂರು ತನಕದ ಬಸ್ ಹತ್ತುತ್ತಾರೆ. ಅದು ಮಂಗಳೂರಿಗೆ ಬರಬೇಕಾದ ಸಮಯಕ್ಕೆ ಬಾರದೇ ಹನ್ನೆರಡು ಗಂಟೆಗೆ ಬಂದು ತಲುಪಿತು . ಅಲ್ಲಿಂದ ಕುಮಟಾಕ್ಕೆ ಹೋಗಬಹುದಾದ ಬಸ್ ಯಾವುದೂ ಇಲ್ಲ ನೀವು ಸೋಮವಾರದ ಬೆಳಿಗ್ಗೆ ಏಳು ಗಂಟೆಗೆ ಹೋಗಬೇಕು ಇವತ್ತು ಯಾಕೆ ಬಂದಿರಿ ಇತ್ಯಾದಿ ನಿಲ್ದಾಣದ ಮೇಲ್ವಿಚಾರಕರು ಮೇಲಸ್ತರದಲ್ಲಿ ಹೇಳಿದರಂತೆ. ಆಕೆಯನ್ನು ಬಸ್ ನಿಲ್ದಾಣದಲ್ಲಿ ತುಸು ಕ್ಷಣವೂ ನಿಲ್ಲದೇ ಫೋಲಿಸರು ಅಲ್ಲಿಂದ ಆಚೆಗೆ ಕಳಿಸಿದರು. ಅವರ ಪರಿಚಯದ ಸಾಗರ ತಾಲ್ಲೂಕಿನವರು ಅವಳಿಗೆ ಅಸಾಯಕ ಪರಿಸ್ಥಿತಿ ಎದುರಾಗಿದೆ ಹೇಗಾದರೂ ಮಾಡಿ ಸೋಮವಾರದ ತನಕ ವಸತಿ ಕಲ್ಪಿಸಿ ಕೊಡಿ ಇಲ್ಲವೇ ಕುಮಟಾಕ್ಕೆ ತಲುಪಿಸುವ ವ್ಯವಸ್ಥೆ ದಯವಿಟ್ಟು ಮಾಡಿ. ಮಂಗಳೂರು ಆಕೆಗೆ ತೀರಾ ಅಪರಿಚಿತ ಪ್ರದೇಶ ಇತ್ಯಾದಿ ಗೋಗರೆದರು.
ನೇರವಾಗಿ ಮಂಗಳೂರು ಬಸ್ ನಿಲ್ದಾಣದ ಕಂಟ್ರೋಲರ ಅವರನ್ನು ಸಂಪರ್ಕಿಸಿದೆ. ಅವರು ಎಷ್ಟು ನಿರಾಯಸವಾಗಿ ಹೇಳಿದರು ಎಂದರೆ ಯಾವುದೇ ಬಸ್ ಇಲ್ಲ. ಹುಬ್ಬಳ್ಳಿಯಿಂದ ಬೆಳಿಗ್ಗೆ ಬಂದಂತಹ ಬಸ್ ಮರಳಿ ಇಲ್ಲಿಂದ ಹೋಗಬೇಕಿತ್ತು ಯಾಕೋ ಆ ಕಡೆಯಿಂದ ಒಂದು ಬಸ್ ಕೂಡಾ ಇಂದು ಬಂದಿಲ್ಲ ಎಂದರು. ಹೀಗೆ ಹೇಳದೇ ಕೇಳದೆ ವ್ಯವಸ್ಥೆ ತಮ್ಮ ಅಪ್ಪನ ಮನೆ ಆಸ್ತಿ ಎಂಬಂತೆ ಬೇಕಾಬಿಟ್ಟಿ ಬದಲಿಸಿ ಹೀಗೆ ಜನರಿಗೆ ಆಗುವ ತೊಂದರೆಗೆ ಯಾರು ಹೊಣೆ ? ಆಕೆಯಂತೆ ಹಲವಾರು ಜನರು ಮುಂದೇನು ಎಂದು ಕಂಗಾಲಾದರು . ಯಾಕೆಂದರೆ ಲಾಡ್ಜಗಳು ಬೇರೆ ಬೇರೆ ರಾಜ್ಯಗಳಿಂದ ಬಂದು ನೆಲಸಿ ಮತ್ತೆ ವಸತಿಗೆ ಅವಕಾಶ ಇಲ್ಲ. ರಸ್ತೆ ಬದಿಯಲ್ಲಿ , ಬಸ್ಸು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ. ಇದು ನನ್ನ ಗಮನಕ್ಕೆ ಬಂದಿದ್ದರಿಂದ ನಾನು ಕಂಡ ಕಂಡ ಮುಖಂಡರುಗಳಿಗೆ , ಸಮಾಜ ಸೇವಕರಿಗೆ , ಶಾಸಕರಾದ ಭರತಶೆಟ್ಟರಿಗೆ, ವೇದವ್ಯಾಸ ಕಾಮತರಿಗೆ ಕಾಲ್ ಮಾಡಿದೆ . ಭರತ ಶೆಟ್ಟರಿಗೆ ಸಂಬಂಧಿಸಿದ ಒಬ್ಬರು ಕಾಲ್ ರಿಸ್ಹೀವ ಮಾಡಿ ಸಮಸ್ಯೆ ಏನು ಹೇಳಿ ಶಾಸಕರು ಮೀಟಿಂಗ್ ನಲ್ಲಿ ಇದ್ದಾರೆ ನಂತರ ಅವರಿಗೆ ಹೇಳುತ್ತೇನೆ ಇಲ್ಲದೇ ಇದ್ದರೆ ಒಮ್ಮೆ ನೀವೇ ಮತ್ತೊಮ್ಮೆ ಕಾಲ್ ಮಾಡಿ ಎಂದರು. ಸರಿ ಎಂದು ಇಪ್ಪತ್ತು ನಿಮಿಷಗಳ ಬಿಟ್ಟು ಕಾಲ್ ಮಾಡಿದರೆ ಕಾಲ್ ರಿಸ್ಹೀವ್ ಮಾಡೇ ಇಲ್ಲ. ಇದು ಆಗುವ ಮಾತಲ್ಲ ಎಂದು ಮಿತ್ರರು ಹೇಳಿದಂತೆ ಸಚಿವ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಮಾಡಿದೆ. ತಕ್ಷಣ ಎತ್ತಿದರು. ನನ್ನ ಪರಿಚಯ ಹೇಳಿ ಸಮಸ್ಯೆ ವಿವರಿಸಿದೆ. ಆ ಕೂಡಲೇ ಅವಳಿಗೆ ಕುಮಟಾ ತಲುಪಿಸುವ ವ್ಯವಸ್ಥೆ ಮಾಡುವದಾಗಿ ಭರವಸೆ ನೀಡಿದರು. ಅಷ್ಟೊತ್ತಿಗಾಗಲೇ ನಾಲ್ಕು ತಾಸುಗಳು ಕಳೆದು ಹೋಗಿದೆ . ನಾನು ಮತ್ತೆ ಫೋನ್ ಮಾಡುವಾಗ ಆಕೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಸಿಕ್ಕಿದೆ ಎಂದಾಗ ಸುಮ್ಮನಾದೆ. ಹತ್ತು ನಿಮಿಷಗಳ ನಂತರ ಪುನಃ ಸಚಿವರು ನನಗೆ ಕಾಲ್ ಮಾಡಿ ಏನಾಯಿತು ಎಂದಾಗ ಆಶ್ಚರ್ಯಗೊಂಡೆ. ಹಲವಾರು ಕಾಲ್ ಮಾಡಿದರೂ ರಿಸ್ಹೀವ್ ಮಾಡದ ಶಾಸಕರ ಮತ್ತು ಮತ್ತೆ ಮತ್ತೆ ಕಾಲ್ ಮಾಡಿ ವಿಚಾರಿಸಿಕೊಂಡ ಸಚಿವ ಶ್ರೀನಿವಾಸ ಪೂಜಾರಿ ನಡುವಿನ ವ್ಯತ್ಯಾಸ ಕಂಡು ಬಂತು . ಅವರ ಸ್ಪಂದನೆಗೆ ಹೃದಯಾಂತರಾಳದಿಂದ ಎರಡು ಬಾರಿ ಧನ್ಯವಾದಗಳ ಅರ್ಪಿಸಿದೆ. ಅವರ ವ್ಯಕ್ತಿತ್ವ ನನ್ನ ಅನುಭವಕ್ಕೆ ಬಂದಿದ್ದು ಎರಡನೇ ಬಾರಿ . ಇದನ್ನು ಅನೇಕ ಮಿತ್ರರುಗಳೊಂದಿಗೆ ಇವತ್ತಿನ ವಿಷಯ ಹಂಚಿಕೊಂಡಾಗ ಶ್ರೀನಿವಾಸ ಪೂಜಾರಿ ಅವರ ಕುರಿತಾಗಿ ಅವರವರ ಕೆಲವು ಅನುಭವ ಹೇಳಿಕೊಂಡರು. ಅವರೊಬ್ಬ ಅತ್ಯುತ್ತಮ ಜನಪ್ರತಿನಿಧಿ ನಿಷ್ಠಾವಂತ ಜನಸೇವಕರು ಎಂಬೆಲ್ಲ ಗುಣಗಾನ ಮಾಡಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇರಲಿಲ್ಲ.

ಗೌರೀಶ್ ಶಾಸ್ರ್ತೀ, ಹಿರಿಯ ಪತ್ರಕರ್ತರು