ಕಾಣೆಯಾದ ವ್ಯಕ್ತಿಯ ಮಾಹಿತಿ ನೀಡುವಂತೆ ಮನವಿ

ಉಡುಪಿ, ಡಿ.20; ಮನೆಯಿಂದ ಕಾಣೆಯಾಗಿರುವ ವ್ಯಕ್ತಿಯ ಪತ್ತೆಗೊಳಿಸಲು, ಮಾಹಿತಿನೀಡಿ- ಸಹಕರಿಸುವಂತೆ, ಸಾರ್ವಜನಿಕರಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ವಿನಂತಿಸಿಕೊಂಡಿದ್ದಾರೆ.
ಭಾವಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಬಿಜು ಬಿನ್ ಚಾಕೋ. ಅವರಿಗೆ 43 ವರ್ಷ, ಕೇರಳದವರು. ಟೈಲ್ಸ್, ಗ್ರಾನೈಟ್ ಜೊಡಿಸುವ ಕೆಲಸ ಬಲ್ಲವರು. ಮಳಯಾಳಂ ಭಾಷೆ ಮಾತಾನಾಡುತ್ತಾರೆ. ಅವರು ಕಳೆದ ನಾಲ್ಕು ತಿಂಗಳ ಹಿಂದೆ ಮನೆಯಿಂದ ಮನಸ್ತಾಪಗೊಂಡು ಕಾಣೆಯಾಗಿದ್ದಾರೆ. ಇವರು ರಿಪ್ಪಿನಪೇಟೆಯಲ್ಲಿ ಕೆಲವು ದಿನಗಳ ಕಳೆದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ದಿನಾಂಕ 15/09/2020 ಬಸ್ಸಿನಲ್ಲಿ ಪ್ರಯಾಣಿಸುವಾಗ ಆಗುಂಬೆ ಬಳಿಯಲ್ಲಿ ಇವರಿಗೆ ಮೂರ್ಚೆ ರೋಗ ಬಾಧಿಸಿದೆ, ತಕ್ಷಣ ಸಾರ್ವಜನಿಕರು ಆಂಬುಲೆನ್ಸ್ ಮೂಲಕ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆ ನಡೆದಿದೆ. ಅದೇ ದಿನ ಸಂಜೆ 4 ಗಂಟೆಯ ಸುಮಾರಿಗೆ ಇವರು ಆಸ್ಪತ್ರೆ ಯಿಂದ ಕಾಣೆಯಾಗಿದ್ದು, ಅಲ್ಲಿಂದ ಇವರ ಇರುವಿಕೆ ತಿಳಿದುಬಂದಿಲ್ಲ. ಉಡುಪಿಗೆ ಬಂದು ಇವರು ನೆಲೆಕಂಡಿದ್ದಾರೆ ಎಂಬ ಶಂಕೆಯು ವ್ಯಕ್ತವಾಗಿದೆ. ಉಡುಪಿ ನಗರದಲ್ಲಿ ಒಂದು ಸುತ್ತಿನ ಹುಡುಕಾಟವನ್ನು ನಾಗರಿಕ ಸಮಿತಿಯ ಕಾರ್ಯಕರ್ತರು ಕುಟುಂಬಿಕರೊಂದಿಗೆ ನಡೆಸಿದ್ದು, ಆದರೆ ವ್ಯಕ್ತಿಯು ಪತ್ತೆಯಾಗಲಿಲ್ಲ.
ಕಾಣೆಯಾದ ಯುವಕನು, ರಾಜ್ಯದ ಯಾವುದೇ ಜಿಲ್ಲೆಯಯಲ್ಲಿ ಇರಲೂ ಬಹುದು. ಇತನ ಹೆಂಡತಿ, ಮಕ್ಕಳು, ಕುಟುಂಬದವರು ಬಹಳವಾಗಿ ದುಃಖಿತರಾಗಿದ್ದಾರೆ. ಸಾರ್ವಜನಿಕರು ಇವರ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಈ ಕೆಳಗೆ ನಮೂದಿಸಿದ ನಾಗರಿಕ ಸಮಿತಿಯ ಸಹಾಯವಾಣಿ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ. ಫೋ ನಂ:- 9164901111, 7760421868.
ಪ್ರಕಟಣೆ:- ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ)