
ಹೊನ್ನಾಳಿಯ ಶಾಸಕರಾದ ರೇಣುಕಾಚಾರ್ಯ ರವರು ತಾನು ಕರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ಹೋಗುವವರೆಗೂ ಕೋವಿಡ್ ಕೇರ್ ಸೆಂಟರ್(ccc) ನಲ್ಲಿ ವಾಸ್ತವ್ಯ ಹೂಡುವುದಾಗಿ ಟ್ವೀಟ್ ಮಾಡಿದ್ದಾರೆ.
ಈ ರೀತಿ ವಾಸ್ತವ್ಯ ಹೂಡಿದ ಶಾಸಕರು ಭಾರತ ದೇಶದಲ್ಲಿ ಯಾರೂ ಇದ್ದಂತೆ ತೋರುವುದಿಲ್ಲ. ಇವರ ನಡೆ ಕರೋನಾ ಸೋಂಕಿತರಿಗೆ ಆತ್ಮವಿಶ್ವಾಸ ತುಂಬಿದೆ.
ಕೆಲವು ದಿನಗಳ ಹಿಂದೆ ರೇಣುಕಾಚಾರ್ಯ ರವರು ಕೋವಿಡ್ ಸೋಂಕಿತರ ಮನರಂಜನೆಗಾಗಿ ಡ್ಯಾನ್ಸ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು.













