ಮಣಿಪಾಲ, ಕಾರು ಓವರ್ ಟೇಕ್ ಮಾಡಿದ ವಿಚಾರ- ಬಸ್ ಮಾಲಕನಿಂದ ಹಲ್ಲೆ ಜೀವ ಬೆದರಿಕೆ ; ದೂರು ದಾಖಲು

ಮಣಿಪಾಲ : ವಾಹನವನ್ನು ಓವರ್ ಟೇಕ್ ಮಾಡಿದ ವಿಚಾರಕ್ಕೆ ಇಂದ್ರಾಳಿಯಲ್ಲಿ ಚೇತನರಾಜ್
ಶೆಟ್ಟಿ ಎಂಬವರನ್ನು ತಡೆದು ಹಲ್ಲೆ ನಡೆಸಿ ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ
ಹಾಕಿರುವುದಾಗಿ ಅಕ್ರಮ್, ಸೈಫ್, ಶರೀಫ್ ಎಂಬ ಮೂವರ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿನ್ನೆ ಬೆಳಿಗ್ಗೆ ಚೇತನರಾಜ್ ಶೆಟ್ಟಿ ಅವರು ತಮ್ಮ ಕಾರಿನಲ್ಲಿ ಸರಳಬೆಟ್ಟಿನಿಂದ ಮಣಿಪಾಲದ ಟೈಗರ್
ಸರ್ಕಲ್ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸಿಂಡಿಕೇಟ್ ಸರ್ಕಲ್ ಬಳಿ ಅಕ್ರಮ್ ಮತ್ತು ಸೈಫ್ ಚಲಾಯಿಸಿ ಕೊಂಡು ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿದ್ದರು. ಈ ವಿಚಾರದಲ್ಲಿ ಆರೋಪಿಗಳು ಚೇತನ್ ರಾಜ್ ಅವರ ಕಾರನ್ನು ಹಿಂಬಾಲಿಸಿ ಕೊಂಡು ಬಂದು ಇಂದ್ರಾಳಿಯಲ್ಲಿ ತಡೆದು ನಿಲ್ಲಿಸಿ ಚೇತನ ರಾಜ್ ಅವರಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಅವರನ್ನು ತಮ್ಮ ಕಾರಿನಲ್ಲಿ ಕುರಿಸಿಕೊಂಡು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಎಕೆಎಂಎಸ್ ಕಚೇರಿಗೆ ಕರೆದುಕೊಂಡು
ಹೋಗಿ ಅಲ್ಲಿ ಸೈಫ್, ಅಕ್ರಮ್ ಹಾಗೂ ಶರೀಫ್ ಎಂಬವರು ಸೇರಿ ಚೇತನ ರಾಜ್ ಎಂಬವರಿಗೆ ಹಲ್ಲೆ
ಮಾಡಿದ್ದು ಮಾತ್ರವಲ್ಲದೆ ಅವರ ಕಾರಿಗೂ ಹಾನಿ ಮಾಡಿದ್ದಾರೆ. ಹಾಗೂ ಈಬಗ್ಗೆ ದೂರು ನೀಡದಂತೆ
ಜೀವ ಬೆದರಿಕೆಯ ಎಚ್ಚರಿಕೆ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.