ಕೊಡಂಕೂರು ವಾರ್ಡಿನ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

ರಾಷ್ಟ್ರದ ಗಮನ ಸೆಳೆದ ಉಡುಪಿಯಲ್ಲಿ ಹಮ್ಮಿಕೊಂಡ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೊಡಂಕೂರು ವಾರ್ಡಿನಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಸುಮಾರು 20 ಎಕರೆ ಹಡಿಲು ಭೂಮಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಇಂದು ದಿನಾಂಕ 20-07-2021 ರಂದು ಕೊಡಂಕೂರು ವಾರ್ಡಿನ ತಾರಕಟ್ಟ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಶ್ರೀ ಕೆಮ್ತೂರು ಸುಂದರ್ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೀ ಪ್ರಶಾಂತ್ ಬಾಳಿಗಾ ವ್ಯವಸ್ಥಾಪಕ ಪಾಲುದಾರರು ಕೆ.ಕೆ ಫಿಷ್ನೆಟ್ ಕಂಪನಿ, ನೇಜಾರು, ಶ್ರೀ ಸಿದ್ದರಾಜು ಮಾಲಕರು ಶ್ರೀ ಮೂಕಾಂಬಿಕಾ ಪಾಲಿ ಪ್ರಾಡಕ್ಟ್ಸ್, ಶ್ರೀನಿವಾಸ ಪೂಜಾರಿ ನಾಟಿ ವೈದ್ಯರು ಇವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು.
ಈ ಭಾಗದಲ್ಲಿ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಸಹಕರಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಸಂಪಾವತಿ, ಸಾಯಿಬಾಬಾ ಮಂದಿರದ ಧರ್ಮದರ್ಶಿಗಳಾದ ದಿವಾಕರ ಶೆಟ್ಟಿ, ಸ್ಥಳೀಯ ಕೃಷಿಕರಾದ ಗಣೇಶ್ ಅಂಚನ್, ಉದ್ಯಮಿಗಳಾದ ರಘುನಾಥ್, ಮೂಡುಬೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಶ್ವನಾಥ್, ಬೂತ್ ಅಧ್ಯಕ್ಷರಾದ ರಿನಿತ್, ಕಾರ್ಯದರ್ಶಿಗಳಾದ ಹರೀಶ್ ಕೋಟ್ಯಾನ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸ್ಥಳೀಯರಾದ ಪ್ರಶಾಂತ್, ಹರೀಶ್, ಅಂಬರೀಷ್, ಪ್ರವೀಣ್ ಶೆಟ್ಟಿ, ರಾಘು, ಪ್ರಕಾಶ್ ಹಾಗೂ ಸಂಘ ಸಂಸ್ಥೆಯ ಸದಸ್ಯರು, ಕೃಷಿಕರು, ಭೂ ಮಾಲಕರು, ಪ್ರಮುಖರು, ಉಪಸ್ಥಿತರಿದ್ದರು.