
ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರ 2ನೆಯ ಹಂತದ ಸೇವಾ ಕಾರ್ಯ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಊಟಕ್ಕೂ ಕಷ್ಟಪಡುತ್ತಿರುವ ಸಂಕಷ್ಟದಲ್ಲಿರುವ 50 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ದಿನ ನಿತ್ಯ ಉಪಯೋಗಕ್ಕೆ ಬರುವ ಸಾಮಗ್ರಿಗಳನ್ನು ನೀಡಲಾಯಿತು. ಈ ಪುಣ್ಯ ಕಾರ್ಯಕ್ಕೆ ಕೆಲವು ದಾನಿಗಳು ಧನ ಸಹಾಯ ಮಾಡಿರುತ್ತಾರೆ. ಇವರಿಗೆ ಗಿಡ ನೀಡಿ ಟ್ರಸ್ಟಿನ ಪರವಾಗಿ ಧನ್ಯವಾದ ತಿಳಿಸಲಾಯಿತು.
ವಿಶೇಷ ಏನಂದ್ರೆ ಫೋಟೋಗೋಸ್ಕರ ಸೇವೆ ಮಾಡುವ ಈ ಕಾಲದಲ್ಲಿ ಯಾವ ಅಸಹಾಯಕರಿಗೆ ಕಿಟ್ ಕೊಡುವ ಫೋಟೋ ತೆಗೆಯದೇ ಬರೀ ಅವರ ಮನೆಗೆ ತಲುಪಿಸುವ ಪ್ರಯತ್ನ ನಿಸ್ವಾರ್ಥ ಸೇವಾ ಟ್ರಸ್ಟಿನ ಅರ್ಥವನ್ನು ಹೆಚ್ಚಿಸಿದೆ.
ವರದಿ : ಹರೀಶ್ ರಾಜ್