ರಾಜ್ಯ
ಇಂಡಿಗೋ ಏರ್ಲೈನ್ಸ್ ಗಗನಸಖಿ ಜತೆ ಅಸಭ್ಯ ವರ್ತನೆ: ಪ್ರಯಾಣಿಕನ ಬಂಧನ

ನವದೆಹಲಿ: ಪ್ರಯಾಣದ ವೇಳೆ ಪ್ರಯಾಣಿಕನೊಬ್ಬ
ಇಂಡಿಗೊ ಏರ್ಲೈನ್ಸ್ ವಿಮಾನದ ಮಹಿಳಾ
ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ
ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು
ಆತನನ್ನು ಬಂಧಿಸಿದ್ದಾರೆ.
ಶ್ರೀನಗರ ಮತ್ತು ಲಖನೌ ನಡುವೆ ಸಂಚರಿಸುತ್ತಿದ್ದ
6E6075 ವಿಮಾನದಲ್ಲಿ ಈ ಘಟನೆ ನಡೆದಿದೆ.
ಅಮೃತಸರ ಮಾರ್ಗವಾಗಿ ಸಂಚರಿಸುವ ಈ ವಿಮಾನವು ಶ್ರೀನಗರದಿಂದ ಹಾರಾಟ ಆರಂಭಿಸಿದ ಬಳಿಕ ಪ್ರಯಾಣಿಕ ಗಗನಸಖಿಯೊಂದಿಗೆ ವಾಗ್ವಾದ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ವಿಮಾನವು
ಅಮೃತಸರ ನಿಲ್ದಾಣಕ್ಕೆ ಆಗಮಿಸುವ ಮುನ್ನ ಭದ್ರತಾ
ಸಿಬ್ಬಂದಿಯನ್ನು ರನ್ವೇ ಬಳಿ ನಿಯೋಜಿಸಿದ್ದರು. ನಂತರ ಪ್ರಯಾಣಿಕನನ್ನು ಬಂಧಿಸಿ, ಪೊಲೀಸರ ವಶಕ್ಕೆ ನೀಡಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ
ಮಾಡಲಾಗಿದೆ.