ರಾಷ್ಟ್ರೀಯ
ಎನ್‍ಕೌಂಟರ್ : ಉಗ್ರಗಾಮಿ ಹತ

ಶ್ರೀನಗರ, ಸೆ.24- ಉಗ್ರಗಾಮಿಗಳ ಹಾವಳಿ ಹೆಚ್ಚಾಗಿರುವ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ. ಮೃತನ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಲ್ವಾಮಜಿಲ್ಲೆಯತ್ರಾಲ್ ಪ್ರದೇಶದ ಮಘಮಾದಲ್ಲಿ ಉಗ್ರರುಅವಿತಿಟ್ಟುಕೊಂದಿರುವ ಖಚಿತ ವರ್ತಮಾನದ ಮೇರೆಗೆಯೋದರು ಮತ್ತು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು.